ಲೈಂಗಿಕ ಕಿರುಕುಳ ನೀಡಿದ ವಿಮಾನ ನಿಲ್ದಾಣ ಅಧಿಕಾರಿಯ ಬಂಧನ

ಗುರುವಾರ, 16 ಏಪ್ರಿಲ್ 2015 (19:03 IST)
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 18 ರಂದು ಮಹಿಳಾ ಪ್ರಯಾಣಿಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ  ವಿಮಾನ ನಿಲ್ದಾಣದ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ, ಕೆಲ ಗಂಟೆಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮಾರ್ಚ್ 18 ರಂದು ದೆಹಲಿಯಿಂದ ಹಾಂಗ್‌ಕಾಂಗ್‌ಗೆ ತೆರಳುತ್ತಿದ್ದ ಬೆಂಗಳೂರು ಮೂಲದ ಮಹಿಳಾ ಪ್ರಯಾಣಿಕಳಿಗೆ ಆರೋಪಿ ವಿನೋದ್ ಕುಮಾರ್ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ.

ಮಹಿಳಾ ಪ್ರಯಾಣಿಕಳ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿನೋದ್ ಕುಮಾರ್ ಸೆಕ್ಷನ್ 354 ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ದಾಖಲಿಸಲಾದ ಪ್ರಕರಣದಲ್ಲಿ ಜಾಮೀನು ಪಡೆಯುವ ಅವಕಾಶವಿದ್ದರಿಂದ ಆತನನ್ನು ಕೆಲ ಗಂಟೆಗಳ ನಂತರ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಐ.ಹೈದರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ