ಅಜ್ಮೇರ್ ಸ್ಫೋಟ: ಅಸೀಮಾನಂದ್, ಇಂದ್ರೇಶ್ ಕುಮಾರ್ ಖುಲಾಸೆ

ಬುಧವಾರ, 8 ಮಾರ್ಚ್ 2017 (17:12 IST)
2007ರಲ್ಲಿ ಅಜ್ಮೆರ್ ಷರೀಫ್ ದರ್ಗಾ ಬಳಿ ನಡೆದ ಬಾಂಬ್ ಸ್ಫೋಟ ಘಟನೆ ಕುರಿತಂತೆ ಕೋರ್ಟ್ ಮೂವರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಇಬ್ಬರನ್ನು ಖುಲಾಸೆಗೊಳಿಸಿದೆ.
 
ಜೈಪುರದ ಎನ್‌‍ಐಎ ಕೋರ್ಟ್ ಅಜ್ಮೇರ್ ಸ್ಪೋಟದ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿದ್ದು, ಸುನೀಲ್ ಜೋಷಿ, ದೇವೇಂದ್ರ ಗುಪ್ತಾ, ಬಾವೇಶ್ ಪಟೇಲ್ ಅಪರಾಧಿಗಳೆಂದು ಘೋಷಿಸಿದ್ದು, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಮಾರ್ಚ್ 17 ರಂದು ಶಿಕ್ಷೆಯ ಅವಧಿಯನ್ನು ಪ್ರಕಟಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
 
ಆರೋಪಿ ಸುನೀಲ್ ಜೋಷಿ ಈಗಾಗಲೇ ಸಾವನ್ನಪ್ಪಿದ್ದರಿಂದ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ಅಸೀಮಾನಂದ ಮತ್ತು ಇಂದ್ರೇಶ್ ಕುಮಾರ್‌ರನ್ನು ಖುಲಾಸೆಗೊಳಿಸಲಾಗಿದೆ.
 
ಅಜ್ಮೇರ್ ದರ್ಗಾ ಬಳಿ ಟಿಫಿನ್ ಬಾಕ್ಸ್‌ನಲ್ಲಿ ಬಾಂಬಿಟ್ಟು ಸ್ಫೋಟಿಸಲಾಗಿತ್ತು, ಸ್ಫೋಟದಲ್ಲಿ ಮೂವರು ಮೃತಪಟ್ಟು 17 ಜನ ಗಾಯಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ