ನನಗೆ ಬೃಹತ್ ಬಂಗಲೆ ಬೇಡ, ಚಿಕ್ಕದೊಂದು ಮನೆ ಕೊಡಿ: ಆಂಟನಿ

ಮಂಗಳವಾರ, 20 ಮೇ 2014 (13:54 IST)
ಯುಪಿಎ ಸರಕಾರದ ಅವಧಿಯಲ್ಲಿ 10 ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎ.ಕೆ.ಆಂಟನಿ, ನನಗೆ  ಸಚಿವರ ಬಂಗಲೆ ಬೇಡ. ಚಿಕ್ಕದಾದ ಮನೆಯೊಂದನ್ನು ಕೊಡಿ ಎಂದು ಸಂಸತ್ತಿನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಹಾಲಿ ಮತ್ತು ಮಾಜಿ ಸಂಸದರಿಗೆ ಮಾದರಿಯಾಗಿದ್ದಾರೆ. 
 
ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿದ್ದರಿಂದ ಎಲ್ಲಾ ಯುಪಿಎ ಸಚಿವರು ಒಂದು ತಿಂಗಳೊಳಗಾಗಿ ತಮ್ಮ ಅಧಿಕೃತ ಬಂಗಲೆಗಳನ್ನು ತೊರೆಯಬೇಕಾಗಿದೆ. ಆದ್ದರಿಂದ ಹೊಸ ಅಧಿಕೃತ ನಿವಾಸ ನೀಡುವಾಗ ನನಗೆ ಚಿಕ್ಕದೊಂದು ಮನೆ ಮಾತ್ರ ನೀಡಿ ಎಂದು ಆಂಟನಿ ಕೋರಿದ್ದಾರೆ.   
 
ಹಿರಿಯ ಸಚಿವರು ಮತ್ತು ಸಂಸದರಿಗೆ ಅಧಿಕೃತ ನಿವಾಸಗಳನ್ನು ಹಂಚುವಾಗ ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ, ನನಗೆ ಬೃಹತ್ ಬಂಗಲೆ ಬೇಡ ಎಂದು ಆಂಟನಿ ಮನವಿ ಮಾಡಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
 
ನೂತನವಾಗಿ ಆಯ್ಕೆಯಾದ 543 ಸಂಸದರಿಗೆ ಅಧಿಕೃತ ನಿವಾಸಗಳನ್ನು ಹಂಚುವುದು ತುಂಬಾ ಕಷ್ಟದ ಕೆಲಸವಾಗಿದೆ. ಸಚಿವರು ಸಂಸದರು ಒತ್ತಡ ತರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
 

ವೆಬ್ದುನಿಯಾವನ್ನು ಓದಿ