ಅಖಿಲೇಶ್ ಉತ್ತಮ ಹುಡುಗ: ರಾಹುಲ್ ಗಾಂಧಿ

ಶನಿವಾರ, 30 ಜುಲೈ 2016 (16:31 IST)
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉತ್ತಮ ಹುಡುಗ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊಂಡಾಡಿದ್ದಾರೆ.

2017ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಲಕ್ನೋನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯುವ ಮುಖ್ಯಮಂತ್ರಿಯನ್ನು ನೋಡಿ. ಆತ ಉತ್ತಮ ಹುಡುಗ. ಆದರೆ ಅವರ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ರಾಜ್ಯದಲ್ಲಿರುವ ಸಮಾಜವಾದಿ ಸರ್ಕಾರದ ಬಗ್ಗೆ ರಾಹುಲ್ ಅವರಿಗೆ ಉತ್ತಮ ಅಭಿಪ್ರಾಯವಿಲ್ಲ. ಆದರೆ ಅಖಿಲೇಶ್ ಅವರನ್ನು ರಾಹುಲ್ ಮೆಚ್ಚುತ್ತಾರೆ.

ರಾಜ್ಯದಲ್ಲಿನ ಕಾನೂನು-ಸುವ್ಯವಸ್ಥೆಯನ್ನು ಟೀಕಿಸಿದ ಅವರು, ಪೊಲೀಸ್ ಠಾಣೆಗಳು ರಾಜಕೀಯ ಪಕ್ಷಗಳ ಕಚೇರಿಗಳಾಗಿ ಬದಲಾಗಿವೆ. ಒಂದು ಪಕ್ಷ (ಬಹುಜನ ಸಮಾಜವಾದಿ ಪಕ್ಷ) ಭೃಷ್ಟಾಚಾರಕ್ಕೆ ಉತ್ತೇಜನ ನೀಡಿದರೆ ಮತ್ತೊಂದು(ಸಮಾಜವಾದಿ) ಗೂಂಡಾಗಿರಿಗೆ ಅವಕಾಶ ನೀಡುತ್ತದೆ. ಹೀಗಾಗಿ  ರಾಜ್ಯದಲ್ಲಿ ಔದ್ಯಮಿಕ ಅಭಿವೃದ್ಧಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

"ಇಲ್ಲಿ ಉದ್ಯಮಗಳು ಹೇಗೆ ಅಭಿವೃದ್ಧಿಯಾಗಲು ಸಾಧ್ಯ? ಇಲ್ಲಿ ವಿದ್ಯುತ್ ಪೂರೈಕೆಯೂ ಇಲ್ಲ. 1989 (ಕೊನೆಯ ಕಾಂಗ್ರೆಸ್ ಸರ್ಕಾರ)ರಿಂದ ಅಭಿವೃದ್ಧಿ ತಟಸ್ಥವಾಗಿದೆ. ಬಿಜೆಪಿ ಅಥವಾ ಬಿಎಸ್‌ಪಿ ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿಲ್ಲ.  ಸಮಾಜವಾದಿ ಸರ್ಕಾರದ್ದೂ ಅದೇ ಕಥೆ ಎಂದು ಅವರು ಕಿಡಿಕಾರಿದ್ದಾರೆ.

ಶೀಲಾ ದಿಕ್ಷೀತ್ ಅವರನ್ನು  ಯುಪಿಯ ಮುಖ್ಯಮಂತ್ರಿಯಾಗಿ ಘೋಷಿಸಿರುವುದನ್ನು ಅವರ ಅನುಭವದ ನೆಲೆಯಲ್ಲಿ ಸಮರ್ಥಿಸಿಕೊಂಡ ಅವರು, ಕಾರ್ಯಕರ್ತರಿಗೆ ಶಿಸ್ತಿನ ಪಾಠವನ್ನು ಬೋಧಿಸಿದರು.

ವರದಿಗಳ ಪ್ರಕಾರ, ರಾಜ್ಯದಲ್ಲಿರುವ ಸಮಾಜವಾದಿ ಸರ್ಕಾರದ ಬಗ್ಗೆ ರಾಹುಲ್ ಅವರಿಗೆ ಉತ್ತಮ ಅಭಿಪ್ರಾಯವಿಲ್ಲ. ಆದರೆ ಅಖಿಲೇಶ್ ಅವರನ್ನು ರಾಹುಲ್ ಮೆಚ್ಚುತ್ತಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ