ಸಹೋದರ ಶಿವಪಾಲ್ ಸಿಂಗ್ ಮತ್ತು ಆಪ್ತ ಅಮರ್ ಸಿಂಗ್ ಜತೆ ನಿನ್ನೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದ್ದು, ಸದ್ಯದಲ್ಲಿ ಜೊತೆಯಾಗಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಸೋದರ ಸಂಬಂಧಿ ರಾಮಗೋಪಾಲ್ ಅವರ ಹೆಸರೆತ್ತದೆ ಕಿಡಿಕಾರಿದ ಅವರು, ಕೇವಲ ಒಬ್ಬ ವ್ಯಕ್ತಿಯಿಂದಾಗಿ ಅಖಿಲೇಶ್ ದಾರಿ ತಪ್ಪುತ್ತಿದ್ದಾರೆ. ನಮ್ಮಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳುವುದರ ಮೂಲಕ ಪಕ್ಷದಲ್ಲಿನ ಭಿನ್ನಮತಗಳು ಮುಂದುವರೆದಿವೆ ಎಂಬುದನ್ನು ಸಹ ಒಪ್ಪಿಕೊಂಡಿದ್ದರು.