ಯುಪಿಯಲ್ಲಿ ಮತ್ತೆ ಭುಗಿಲೆದ್ದ ಯಾದವೀ ಕಲಹ

ಶುಕ್ರವಾರ, 30 ಡಿಸೆಂಬರ್ 2016 (11:02 IST)
ಉತ್ತರಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ತಂದೆಯ ವಿರುದ್ಧ ತಿರುಗಿ ಬಿದ್ದಿರುವ 
ಮುಲಾಯಂ ಪುತ್ರ ಅಖಿಲೇಶ್ ಯಾದವ್ ಮುಂಬರುವ ವಿಧಾನ ಸಭಾ ಚುನಾವಣೆಗೆ ತಮ್ಮ ಬೆಂಬಲಿಗರನ್ನೊಳಗೊಂಡ 235 ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. 
 
ಬುಧವಾರ ಮುಲಾಯಂ ಸಿಂಗ್ ಯಾದವ್ 403 ಸೀಟುಗಳ ಪೈಕಿ  325 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದರು. ಆ ಸಮಯದಲ್ಲಿ ಮುಲಾಯಂ ಸಹೋದರ ಶಿವಪಾಲ್ ಯಾದವ್ ಹಾಜರಿದ್ದರು. ಆದರೆ ಅಖಿಲೇಶ್ ಇರಲಿಲ್ಲ. ಗುರುವಾರ ರಾತ್ರಿ ಶಿವಪಾಲ್ 78 ಅಭ್ಯರ್ಥಿಗಳ ಇನ್ನೊಂದು ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.
 
ತಂದೆ ತಮ್ಮೊಂದಿಗೆ ಚರ್ಚಿಸದೆ 354 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದ್ದ ಅಖಿಲೇಶ್ ತಮ್ಮ ಬೆಂಬಲಿಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ತಂದೆಗೆ ತಿರುಗೇಟು ನೀಡಿದ್ದಾರೆ.
 
ನಿನ್ನೆ ಅಖಿಲೇಶ್ ಯಾದವ್ ತಂದೆ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಜತೆ 6 ಗಂಟೆಗಳ ಕಾಲ ಗೌಪ್ಯ ಸಭೆ ನಡೆಸಿದ್ದರು. 
 
ಬಳಿ ತಮ್ಮ ಬೆಂಬಲಿಗರ ಜೊತೆ ನಡೆಸಿದ ಮಾತುಕತೆ ಬಳಿಕ ಅಖಿಲೇಶ್ ಅವರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಏಳುವ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ