ಆಗ್ರಾವನ್ನು ಸೈಕಲ್ ಸಿಟಿ ಮಾಡ ಹೊರಟಿರುವ ಅಖಿಲೇಶ್

ಬುಧವಾರ, 13 ಆಗಸ್ಟ್ 2014 (11:50 IST)
ಉತ್ತರಪ್ರದೇಶ್ ಸರಕಾರ ಆಗ್ರಾ, ಲಖನೌ ಮತ್ತು ನೊಯ್ಡಾವನ್ನು ಸೈಕಲ್ ಸ್ನೇಹಿ ನಗರಗಳನ್ನಾಗಿಸಲು ಹೊರಟಿದೆ ಎಂದು  ಸರಕಾರಿ ಮೂಲಗಳು ತಿಳಿಸಿವೆ

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾವನ್ನು ಭವಿಷ್ಯದಲ್ಲಿ ಸೈಕಲ್ ಸ್ನೇಹಿ ನಗರಗಳನ್ನಾಗಿ  ಅಭಿವೃದ್ಧಿ ಪಡಿಸಲು  ಪ್ರಮುಖ ಮಾರ್ಗಗಳಲ್ಲಿ ಸೈಕಲ್ ಟ್ರ್ಯಾಕ್  ನಿರ್ಮಿಸಲಾಗುವುದು ಎಂದು  ಅಧಿಕಾರಿಗಳು ತಿಳಿಸಿದ್ದಾರೆ. 
 
ಜನರಿಗೆ ಸೈಕಲ್ ಬಾಡಿಗೆಗೆ ಸಿಗುವಂತೆ ಮಾಡಲಾಗುತ್ತದೆ ಅಲ್ಲದೇ, ಸೈಕಲ್ ಸ್ಟೆಂಡ್ ಮತ್ತು ಸೆಲ್ಟರ್‌ಗಳನ್ನು ನಿರ್ಮಿಸಲಾಗುವುದು. ಕೇವಲ ನೊಯ್ಡಾ ಅಷ್ಟೇ ಅಲ್ಲ , ಲಖನೌ ಮತ್ತು ಆಗ್ರಾಗಳನ್ನು ಸಹ ಸೈಕಲ್ ನಗರಗಳಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಅಲ್ಲದೇ  ನೊಯ್ಡಾದಲ್ಲಿ 2,500 ಎಕರೆ ಜಾಗದಲ್ಲಿ ಹಸಿರು ಪಾರ್ಕ್ ನಿರ್ಮಿಸಲಾಗುವುದು.  ನಗರಕ್ಕೆ ಹಸಿರ ಹೊದಿಕೆಯಂತೆ  ನಗರವನ್ನು ತಂಪಾಗಿಡುವಲ್ಲಿ ಇದು ನೆರವಾಗುವುದು. 3 ಎಕರೆ ವಾಟರ್ ಬಾಡಿ,  ಜಿಂಕೆ ಪಾರ್ಕ್ ಮತ್ತು ಅರಣ್ಯ ಜಾಗೃತಿ ಕೇಂದ್ರಗಳನ್ನು ಕೂಡ ಇದು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಅಖಿಲೇಶ್ ತಿಳಿಸಿದ್ದಾರೆ. 
 
ವಿದೇಶಿಗರು ಸೈಕಲ್ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ನಾವು ಕೂಡ ತಾಜ್ ನಗರ ಆಗ್ರಾವನ್ನು ಕಡ್ಡಾಯ ಸೈಕಲ್ ಸಿಟಿಯಾಗಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ