ಅಖ್ಲಾಕ್ ಹತ್ಯೆ ಪ್ರಕರಣ ಖಂಡಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಬುಧವಾರ, 7 ಅಕ್ಟೋಬರ್ 2015 (14:07 IST)
ಗೋಮಾಂಸವನ್ನು ಸಂಗರಹಿಸಿಟ್ಟಿದ್ದಾನೆ ಎಂಬ ಕಾರಣದಿಂದ ಹತ್ಯೆಗೈಯ್ಯಲಾದ ದಾದ್ರಿ ಕೇಸ್‌ಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರತಿಕ್ರಿಯಿಸಿದ್ದು, ಸಹಿಷ್ಣುತೆಯ ಮೌಲ್ಯ ಕುಸಿಯುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ ಎನ್ನುವ ಮೂಲಕ ಹತ್ಯೆ ಪ್ರಕರಣವನ್ನು ಕಂಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ನಾನಾ ರೀತಿಯ ಧರ್ಮದ ಜನರು ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೇ ಆದರೂ ಕೂಡ ದೇಶದ ವೈವಿಧ್ಯತೆಯ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಾಗಿದೆ. ದೇಶದ ವೈವಿಧ್ಯತೆ,  ಭಾವೈಕ್ಯತೆ ಹಾಗೂ ಸಹಿಷ್ಣುತೆಗಳನ್ನು ಮನಸಿನಲ್ಲಿಡಿ ಎಂದು ಖಡಕ್ ಎಚ್ಚರಿಕೆ ನೀಡಿರುವ ಅವರು, ಘಟನೆಯನ್ನು ಸಂಪೂರ್ಣವಾಗಿ ಖಂಡಿಸಿದ್ದಾರೆ. 
 
ಇನ್ನು ಗೋಮಾಂಸವನ್ನು ಮನೆಯಲ್ಲಿ ಬಚ್ಚಿಟ್ಟು ತಿಂದಿದ್ದಾನೆ ಎಂಬ ಆರೋಪ ಹೊರಿಸಿದ ಉದ್ರಿಕ್ತ ಗುಂಪೊಂದು ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್‌ನಲ್ಲಿ ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿ. ಮೊಹಮ್ಮದ್ ಅಖ್ಲಾಕ್ ಎಂಬ ಯುವಕನನ್ನು ಹತ್ಯೆ ಗೈದಿದ್ದರು. ಈ ಹಿನ್ನೆಲೆಯಲ್ಲಿ ಪ್ರಣಬ್ ಮುಖರ್ಜಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ