ಎಲ್ಲಾ ಧರ್ಮಗಳು ಮಹಿಳಾ ವಿರೋಧಿಯಾಗಿವೆ: ತಸ್ಲಿಮಾ ನಸ್ರಿನ್

ಭಾನುವಾರ, 7 ಫೆಬ್ರವರಿ 2016 (15:56 IST)
ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಹೆಚ್ಚಾಗಿದೆ ಎನ್ನುವ ಚರ್ಚೆ ನಡೆಯುತ್ತಿರುವ ಮಧ್ಯೆ,ಬಹುತೇಕ ಧರ್ಮಗಳು ಮಹಿಳಾ ವಿರೋಧಿಯಾಗಿವೆ. ಮೂಲಭೂತವಾದಿಗಳು ಮತ್ತಷ್ಟು ಮಹಿಳಾ ವಿರೋಧಿಯಾಗಿದ್ದಾರೆ ಎಂದು ಖ್ಯಾತ ಸಾಹಿತಿ ತಸ್ಲೀಮಾ ನಸ್ರಿನ್ ಹೇಳಿದ್ದಾರೆ. 
 
ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ತಸ್ಲಿಮಾ, ಭಾರತದಲ್ಲಿರುವ ಜಾತ್ಯಾತೀತವಾದಿಗಳು ಕೇವಲ ಹಿಂದು ಮೂಲಭೂತವಾದಿಗಳನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಆದರೆ, ಮುಸ್ಲಿಂ ಮೂಲಭೂತವಾದಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಭಾರತ ದೇಶ ಸಹಿಷ್ಣುತೆಯ ದೇಶವಾಗಿದೆ. ದೇಶದಲ್ಲಿ ಕೆಲ ಅಸಹಿಷ್ಣುತೆಯಿರುವ ವ್ಯಕ್ತಿಗಳು ಶಾಂತಿ ನೆಮ್ಮದಿಯನ್ನು ಕೆಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಭಾರತದಲ್ಲಿ ಪ್ರತಿಯೊಬ್ಬರು ಇತರೆ ಧರ್ಮಗಳನ್ನು ಗೌರವಿಸುತ್ತಾರೆ. ದೇಶದ ಕಾನೂನು ಅಸಹಿಷ್ಣುತೆಯನ್ನು ಬೆಂಬಲಿಸುವುದಿಲ್ಲ. ಆದರೆ, ಬಹಳಷ್ಟು ಜನ ಅಸಹಿಷ್ಣುತೆಯನ್ನು ಹೊಂದಿದ್ದಾರೆ ಎಂದು ಬಾಂಗ್ಲಾದೇಶ ಮೂಲದ ಖ್ಯಾತ ಸಾಹಿತಿ ತಸ್ಲಿಮಾ ನಸ್ರಿನ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ