ಕೋಲಿ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಅಲಹಾಬಾದ್ ಹೈಕೋರ್ಟ್

ಬುಧವಾರ, 28 ಜನವರಿ 2015 (16:39 IST)
ಮಕ್ಕಳ ಹಾಗೂ ಮಹಿಳೆಯರ ನರಹಂತಕ, ಸರಣಿ ಕೊಲೆ ಪ್ರಕರಣ ಆರೋಪಿಯಾಗಿದ್ದ ಕುಖ್ಯಾತ ರೌಡಿಯೋರ್ವನಿಗೆ ಸಂಬಂಧಿಸಿದಂತೆ ಇಲ್ಲಿನ ಹೈಕೋರ್ಟ್ ಇಂದು ವಿಶೇಷ ತೀರ್ಪನ್ನು ಪ್ರಕಟಿಸಿದ್ದು,  ಆರೋಪಿಗೆ ಈ ಹಿಂದೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪಿತ್ತಿದೆ. 
 
ಗಲ್ಲು ಶಿಕ್ಷೆಯಿಂದ ಪಾರದ ಆರೋಪಿಯನ್ನು ಸುರೇಂದ್ರ ಕೋರಿ ಎನ್ನಲಾಗಿದ್ದು, ಈ ತ 2005-06ನೇ ಸಾಲಿನಲ್ಲಿ 19 ಮಂದಿಯನ್ನು ಹತ್ಯೆ ಗೈದಿದ್ದ. ಇದು ತನಿಖೆಯಿಂದ ಸಾಭೀತಾಗಿತ್ತು. ಬಳಿಕ ವಾದ ವಿವಾದಗಳನ್ನು ಆಲಿಸಿದ್ದ ಕೆಳ ಹಂತದ ನ್ಯಾಯಾಲಯ ಆರೋಪಿ ಕೋರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ತೀರ್ಪನ್ನು ಪ್ರಶ್ನಿಸಿ ಆರೋಪಿ 
ಹೈಕೋರ್ಟ್ ಮೆಟ್ಟಿಲೇರಿದ್ದ. 
 
ವಾದ ವಿವಾದಗಳನ್ನು ಆಲಿಸಿದ್ದ ಹೈಕೋರ್ಟ್‌ನ ಏಕ ಸದಸ್ಯಪೀಠ ಹಲವು ದಿನಗಳ ಬಳಿಕ ಈ ತೀರ್ಪನ್ನು ಪ್ರಕಟಿಸಿದೆ. ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ತೀರ್ಪಿತ್ತಿದೆ. 
 
ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಈ ಆರೋಪಿ, ಮಹಿಳೆಯರು ಹಾಗೂ ಮಕ್ಕಳನ್ನೂ ಒಳಗೊಂಡಂತೆ ಒಟ್ಟು 19 ಮಂದಿಯನ್ನು ಯಾವುದೇ ಅಪರಾಧವಿಲ್ಲದೆ ಹತ್ಯೆಗೈದು ತನ್ನ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದ. ತನಿಖೆಯ ಬಳಿಕ ಈತನೇ ಮುಖ್ಯ ಆರೋಪಿ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗೆ ಹಟ್ಟಲಾಗಿತ್ತು.   

ವೆಬ್ದುನಿಯಾವನ್ನು ಓದಿ