ಬಿಜೆಪಿ ಗೋಲ್‌ಮಾಲ್: ಪಂಕಜ್ ಮುಂಡ್ರೆ ನಂತ್ರ, ಮಹಾರಾಷ್ಟ್ರದ ಮತ್ತೊಬ್ಬ ಸಚಿವನಿಂದ 191 ಕೋಟಿ ರೂ ಅವ್ಯವಹಾರ

ಮಂಗಳವಾರ, 30 ಜೂನ್ 2015 (14:29 IST)
ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಪಂಕಜ್ ಮುಂಡೆಯ 206 ಕೋಟಿ ರೂ.ಹಗರಣದ  ನಂತರ ಮತ್ತೊಬ್ಬ ಸಚಿವ ವಿನೋದ್ ತಾವಡೆ 191 ಕೋಟಿ ರೂಪಾಯಿಗಳ ಗುತ್ತಿಗೆ ನೀಡುವಲ್ಲಿ ಅವ್ಯವಹಾರವೆಸಗಿರುವುದು ಬಹಿರಂಗವಾಗಿದೆ
 
ಏತನ್ಮಧ್ಯೆ, 191 ಕೋಟಿ ರೂಪಾಯಿಗಳ ಗುತ್ತಿಗೆ ನೀಡುವಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಚಿವ ವಿನೋದ್ ತಾವಡೆ ತಿಳಿಸಿದ್ದಾರೆ.
 
ಗುತ್ತಿಗೆದಾರರಿಗೆ ಒಂದು ರೂಪಾಯಿ ಕೂಡಾ ಪಾವತಿಸಲಾಗಿಲ್ಲ. ಹಣಕಾಸು ಇಲಾಖೆ ಗುತ್ತಿಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಗುತ್ತಿಗೆ ನೀಡುವುದನ್ನು ನಿಲ್ಲಿಸಲಾಯಿತು ಎಂದು ತಿಳಿಸಿದ್ದಾರೆ.
 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಪಂಕಜಾ ಮುಂಡೆ 206 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿದ್ದರೆ, ಸಚಿವ ತಾವಡೆ 191 ಕೋಟಿ ರೂಪಾಯಿಗಳ ಗುತ್ತಿಗೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.
 
ಶಿಕ್ಷಣ ಖಾತೆ ಸಚಿವರಾದ ತಾವಡೆ ಇ-ಟೆಂಡರ್‌ ಕರೆಯದೆ 191 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿರುವ ಬಗ್ಗೆ ಹಣಕಾಸು ಇಲಾಖೆ ತನಿಖೆಗೆ ಆದೇಶ ನೀಡಿದೆ. 
 

ವೆಬ್ದುನಿಯಾವನ್ನು ಓದಿ