ಮೀನಿನ ಹೊಟ್ಟೆಯ ಮೇಲೆ 'ಅಲ್ಲಾಹ" ಹೆಸರು, ಖರೀದಿ ದರ ಕೇವಲ 30 ಲಕ್ಷ ರೂ.

ಸೋಮವಾರ, 28 ಜುಲೈ 2014 (18:59 IST)
ನೀವು ಸಮುದ್ರದಲ್ಲಿ ಅಥವಾ ನದಿಗಳಲ್ಲಿ ಬಣ್ಣ ಬಣ್ಣದ ಕೆಲವು ಮೀನುಗಳು ನೋಡಿರುತ್ತಿರಿ. ಆದರೆ, ಈ ಮೀನನ್ನು ನೋಡಿದರೆ ನೀವು ಆಶ್ಚರ್ಯವಾಗುತ್ತಿರಿ. ಈ ಮೀನಿನ ಹೊಟ್ಟೆಯ ಮೇಲೆ "ಅಲ್ಲಾ" ಎಂಬ ಹೆಸರು ಬರೆಯಲಾಗಿದೆ. ನಿಮಗೆ ವಿಶ್ವಾಸ ಬರದಿರಬಹುದು ಆದರೆ ಇದು ಸತ್ಯವಾಗಿದೆ. 
 
ಅಧ್ಬುತವಾಗಿರುವ ಈ ಮೀನನ್ನು ನೋಡಲು ಸಾವಿರಾರು ಜನರು ಸೇರುತ್ತಿದ್ದಾರೆ. ಬಹಿರಂಗ ಹರಾಜಿನಲ್ಲಿ ಈ ಮೀನಿನ ಬೆಲೆ 30 ಲಕ್ಷ ರೂಪಾಯಿಗಳವರೆಗೆ ಕೂಗಲಾಯಿತು. ಒಂದು ಮೀನಿನ ದರ 30 ಲಕ್ಷ ರೂಪಾಯಿಗಳನ್ನು ನೀಡಿ ಗ್ರಾಹಕರು ಖರೀದಿಸಲು ಸಿದ್ದರಾಗಿದ್ದರೂ,  ಮೀನಿನ ಮಾಲೀಕ ಮಾರಲು ಸಿದ್ದನಿಲ್ಲ. ಆಸ್ಕರ್‌‌‌ ಜಾತಿಯ ಈ ಮೀನಿನ ಜೊತೆಗೆ ಬೇರೆ ಮೀನುಗಳು ಇದ್ದಲ್ಲಿ ಆ ಮೀನುಗಳು ಸಾವನ್ನಪ್ಪುತ್ತವೆ. ಇಲ್ಲಿಯವರೆಗೆ 40 ಮೀನುಗಳು ಸತ್ತಿವೆ ಎಂದು ಮೂಲಗಳು ತಿಳಿಸಿವೆ.. 
 
ರಂಜಾನ್‌‍‌ದ ಪವಿತ್ರ ‌ದಿನಗಳಲ್ಲಿ "ಅಲ್ಲಾ" ಹೆಸರು ಹೊತ್ತಿರುವ ಮೀನು ಕಂಡು ಬಂದಿರುವುದು ಪವಾಡವಾಗಿದೆ ಎನ್ನುವುದು ಮುಸ್ಲಿಮರ ನಂಬಿಕೆಯಾಗಿದೆ. 
 
 ಝಾನ್ಸಿ ಮಹಾನಗರದ ನಗರಾ ಕ್ಷೇತ್ರದ ಪ್ರತಾಪ್‌ಪೂರಾ ನಿವಾಸಿ ರಾಜೇಂದ್ರ ಕುಮಾರ ಆಯುರ್ವೇಧ ಔಷದಧ ವ್ಯಾಪಾರಿಯಾಗಿದ್ದಾನೆ. ಒಂದು ವರ್ಷದ ಹಿಂದೆ ಈತ ಆಕ್ವೇರಿಯಂನಲ್ಲಿ ಮೀನುಗಳನ್ನು ಸಂಗ್ರಹಿಸಲು 21 ಮೀನುಗಳನ್ನು ಖರೀದಿಸಿದ್ದನು. ಇದರಲ್ಲಿ 20 ಸಾಮಾನ್ಯ ಮೀನುಗಳು ಮತ್ತು ಒಂದು ಆಸ್ಕರ್ ಜಾತಿಯ ಮೀನು ಕೂಡ ಇತ್ತು. ಒಂದು ತಿಂಗಳ ಅವಧಿಯಲ್ಲಿ ಆಸ್ಕರ್‌ ಜಾತಿಯ ಮೀನನ್ನು ಹೊರತುಪಡಿಸಿ ಇತರ ಉಳಿದ ಎಲ್ಲಾ ಮೀನುಗಳು ಸಾವನ್ನಪ್ಪಿದವು.

ವೆಬ್ದುನಿಯಾವನ್ನು ಓದಿ