ಲಲಿತ್‌ಗೇಟ್, ವ್ಯಾಪಂ ಬಿಕ್ಕಟ್ಟು: ಸರ್ವಪಕ್ಷಗಳ ಸಭೆ ಕರೆದ ಲೋಕಸಭೆಯ ಸಭಾಪತಿ

ಬುಧವಾರ, 29 ಜುಲೈ 2015 (15:56 IST)
ಮುಂಗಾರು ಅಧಿವೇಶನ ನಿರಂತರವಾಗಿ ವಿಪಕ್ಷಗಳ ಕೋಲಾಹಲಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಕೇಂದ್ರ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ಸಂಧಾನಕ್ಕಾಗಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. 
 
ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ. ಸರ್ವಪಕ್ಷಗಳ ಸಭೆಯಿಂದಾಗಿ ವಿಪಕ್ಷಗಳ ಕೋಲಾಹಲ ಅಂತ್ಯಗೊಳ್ಳುತ್ತದೆ ಎಂದು ಭಾವಿಸಿಲ್ಲ. ಆದರೆ, ಲೋಕಸಭೆಯ ಸಭಾಪತಿಯಾಗಿ ಸುಗಮವಾಗಿ ಸಂಸತ್ ಕಲಾಪ ನಡೆಸಲು ಅನುವಾಗುವಂತೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
 
ಕಾಂಗ್ರೆಸ್ ಸಂಸದ ಆಧಿರ್ ರಂಜನ್ ಚೌಧರಿ ಸ್ಪೀಕರ್ ಕುಳಿತಿರುವ ವೇದಿಕೆಯನ್ನು ಹತ್ತಿ ಅಸಭ್ಯವಾಗಿ ವರ್ತಿಸಿದ್ದರಿಂದ ಸಭಾಪತಿ ಮಹಾಜನ್, ಕೂಡಲೇ ಸಂಸತ್‌ ಹಾಲ್‌ನಿಂದ ಹೊರಹೋಗುವಂತೆ ಆದೇಶಿಸಿದ್ದಲ್ಲದೇ ಸಭಾಪತಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
 
ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಭಾಪತಿಗಳು ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.
 
ಮುಂಗಾರು ಅಧಿವೇಶನ ಸುಗಮವಾಗಿ ಸಾಗಲು ಸರ್ವಪಕ್ಷಗಳು ಬೆಂಬಲಿಸಬೇಕು ಎನ್ನುವ ಲೋಕಸಭೆ ಸಭಾಪತಿ ಸುಮಿತ್ರಾ ಮಹಾಜನ್ ಕೋರಿಕೆಯನ್ನು ವಿಪಕ್ಷಗಳು ಸದಸ್ಯರು ತಿರಸ್ಕರಿಸಿದ್ದಾರೆ ಎಂದು ಸಂಸತ್‌ ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ