ಬಿಹಾರ್ ಸಿಎಂ ನಿತೀಶ್ ಕುಮಾರ್ ಹಗಲುಗನಸು ಕಾಣುವ ಮುಂಗೇರಿಲಾಲ್‌ನಂತೆ: ಅಮಿತ್ ಶಾ

ಸೋಮವಾರ, 5 ಅಕ್ಟೋಬರ್ 2015 (18:49 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಗಲುಗನಸು ಕಾಣುವ ಮುಂಗೇರಿಲಾಲ್‌ನಂತೆ. ಪ್ರಧಾನಿಯಾಗುವ ಬಯಕೆಯಿಂದ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡು ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
 
ಆರ್‌ಜೆಡಿ ಅಧಿಕಾರ ನಡೆಸಿದ 15 ವರ್ಷಗಳ ಅವಧಿಯಲ್ಲಿ ಜಂಗಲ್ ರಾಜ್ ತಾಂಡವವಾಡುತ್ತಿತ್ತು ಎಂದು ಹೇಳಿಕೆ ನೀಡಿದ್ದ ನಿತೀಶ್ ಕುಮಾರ್. ಕೇವಲ ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆಯಿಂದ ಮತ್ತೆ ಲಾಲು ಪಾಳಯಕ್ಕೆ ಜಿಗಿದಿದ್ದಾರೆ ಎಂದು ಲೇವಡಿ ಮಾಡಿದರು.
 
ಪ್ರಧಾನಮಂತ್ರಿ ಹುದ್ದೆಯ ಆಸೆಗಾಗಿ ನಿತೀಶ್ ಕುಮಾರ್ ಎರಡು ವರ್ಷಗಳ ಕಾಲ ನಮ್ಮನ್ನು ವಂಚಿಸಿ 2013ರಲ್ಲಿ ನಮ್ಮೊಂದಿಗಿನ ಮೈತ್ರಿ ಕಡಿದುಕೊಂಡಿದ್ದರು ಎಂದು ಬಿಹಾರ್ ಚುನಾವಣೆ ಪ್ರಚಾರದಲ್ಲಿ ಶಾ ವಾಗ್ದಾಳಿ ನಡೆಸಿದ್ದಾರೆ. 
 
ನಾವು ನಿತೀಶ್ ಕುಮಾರ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲು ಸಿದ್ದರಿದ್ದೇವು. ಆದರೆ ಜೆಡಿಯು ಪಕ್ಷ ಕೇವಲ ಬಿಹಾರ್‌ ರಾಜ್ಯದಲ್ಲಿ ಮಾತ್ರವಿದೆ. ಬೇರೆ ರಾಜ್ಯಗಳಲ್ಲಿ ಜೆಡಿಯು ಪಕ್ಷಕ್ಕೆ ಅಸ್ತಿತ್ವವಿಲ್ಲವಾದ್ದರಿಂದ ಅವರನ್ನು ಕೈ ಬಿಡಲಾಯಿತು ಎಂದು ಹೇಳಿದರು.
 
ಬಿಹಾರ್ ಸಿಎಂ ನಿತೀಶ್ ಕುಮಾರ್‌ಗೆ ಹಗಲುಗನಸು ಕಾಣುವ ಮುಂಗೇರಿಲಾಲ್‌ನಂತೆ ಸದಾ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುತ್ತಾರೆ. ಆದರೆ, ಬಿಹಾರ್ ಜನತೆ ಈ ಬಾರಿ ಬಿಜೆಪಿಗೆ ಬಹುಮತ ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ