ಕಟ್ಟಾ ಬೆಂಬಲಿಗರಿಗೆ ಹೆಚ್ಚಿನ ಹೊಣೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಶನಿವಾರ, 4 ಜುಲೈ 2015 (16:38 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಟ್ಟಾ ಬೆಂಬಲಿಗರಾದ ಭೂಪೇಂದ್ರ ಯಾದವ್, ಅವಿನಾಶ್ ರೈ ಖನ್ನಾ, ಅನಿಲ್ ಜೈನ್, ಕೈಲಾಶ್ ವಿಜಯವರ್ಗೀಯ, ಶ್ಯಾಮ್ ಝಾಜು, ಸರೋಜ್ ಪಾಂಡೆ ಮತ್ತು ಮುರಳಿಧರ್ ರಾವ್ ಅವರಿಗೆ ಪಕ್ಷದ ಹೆಚ್ಚಿನ ಹೊಣೆಯನ್ನು ವಹಿಸಿದ್ದಾರೆ.   
 
ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದ ಭೂಪೇಂದ್ರ ಯಾದವ್ ಮುಂಬರುವ ಕೆಲ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಬಿಹಾರ್ ರಾಜ್ಯದ ಉಸ್ತುವಾರಿಯಾಗಿ ಮುಂದುವರಿಯಲಿದ್ದು ಬಿಜೆಪಿ ಎಸ್‌ಸಿ ಮೊರ್ಚಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 
 
ಭೂಪರೇಂದ್ರ ಯಾದವ್ ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ನೀಡಿದ ಹೊಣೆಯನ್ನು ಯಶಸ್ವಿಯಾಗಿ ನಿಬಾಯಿಸಿ ಆಯಾ ರಾಜ್ಯಗಳಲ್ಲಿ ಪಕ್ಷ ಸರಕಾರ ರಚಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು.
 
ಅವಿನಾಶ್ ರೈ ಖನ್ನಾ ಅವರಿಗೆ ರಾಜಸ್ಥಾನ ಮತ್ತು ಜಮ್ಮು ಕಾಶ್ಮಿರದ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಮುರಳಿಧರ್ ರಾವ್ ಅವರಿಗೆ ಕರ್ನಾಟಕ ಮತ್ತು ತಮಿಳುನಾಡಿನ ಉಸ್ತುವಾರಿ ಜೊತೆಗೆ ಯುವ ಮೊರ್ಚಾದ ಹೊಣೆಯನ್ನು ಹೊರಲಿದ್ದಾರೆ. 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಪಕ್ಷದ ಪ್ರದಾನ ಕಾರ್ಯದರ್ಶಿಯಾದ ಸರೋಜ್ ಪಾಂಡೆಯವರಿಗೆ ಮಹಾರಾಷ್ಟ್ರದ ಹೊಣೆ ಹೊರಿಸಲಾಗಿದೆ. ವಿಜಯವರ್ಗಿಯ ಅವರಿಗೆ ಪಶ್ಚಿಮ ಬಂಗಾಳದ ಹೊಣೆ ನೀಡಲಾಗಿದೆ.  
 
ಉತ್ತರಪ್ರದೇಶದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಓಂ ಮಾಥುರ್ ಅವರಿಗೆ ಹೆಚ್ಚಿನ ಹೊಣೆಯನ್ನು ನೀಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ