ಬಿಜೆಪಿ ಸಚಿವನ ಭೂ ಹಗರಣ: ವರದಿ ನೀಡುವಂತೆ ಆದೇಶಿಸಿದ ಅಮಿತ್ ಶಾ

ಗುರುವಾರ, 2 ಜೂನ್ 2016 (16:18 IST)
ಅಕ್ರಮ ಭೂ ಕಬಳಿಕೆ ಕುರಿತ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶಿಸಿದ್ದಾರೆ.
 
ಮಹಾರಾಷ್ಟ್ರ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ 2 ಎಕರೆ ಭೂಮಿಯನ್ನು ಕೇವಲ 3.75 ಕೋಟಿ ರೂಪಾಯಿಗಳಿಗೆ ಸಚಿವ ಖಾಡ್ಸೆ ಖರೀದಿಸಿದ್ದರು. ಆದರೆ, ಭೂಮಿಯ ನಿಜವಾದ ಮೌಲ್ಯ 40 ಕೋಟಿ ರೂಪಾಯಿಗಳಾಗಿವೆ ಎಂದು ಬಿಲ್ಡರ್ ಹೇಮಂತ್ ಗಾವಂಡೆ ಆರೋಪಿಸಿದ್ದಾರೆ.
 
ಏಕನಾಥ್ ಖಾಡ್ಸೆಯವರ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಾಣುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
 
ಆಮ್ ಆದ್ಮಿ ಪಕ್ಷ ಕೂಡಾ ಸಚಿವ ಖಾಡ್ಸೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಖಾಡ್ಸೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ