ಅಮಿತ್ ಶಾ ಜಮ್ಮು ಕಾಶ್ಮಿರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ: ಠಾಕ್ರೆ

ಶನಿವಾರ, 25 ಜುಲೈ 2015 (20:43 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಗೆಲ್ಲಲು ಸಿದ್ದತೆ ಮಾಡಿಕೊಳ್ಳಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆಗೆ ಪ್ರತಿ ಕರೆ ನೀಡಿದ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಜಮ್ಮು ಕಾಶ್ಮಿರದಲ್ಲೂ ಏಕಪಕ್ಷದ ಸರಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. 
 
ಜಮ್ಮು ಕಾಶ್ಮಿರದಲ್ಲಿ ಬಿಜೆಪಿ ಪಕ್ಷ ಪಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮುಫ್ತಿ ಮೊಹಮ್ಮದ್ ಸಯೀದ್ ಅವರನ್ನು ಮುಖ್ಯಮಂತ್ರಿಯಾಗಿಸಿದೆ ಎಂದು ವ್ಯಂಗ್ಯವಾಡಿದರು.
 
ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ . ಮಹಾರಾಷ್ಟ್ರದ ಬಗ್ಗೆ ಮಾತನಾಡಿದಂತೆ ಜಮ್ಮು ಕಾಶ್ಮಿರದಲ್ಲು ಅದೇ ರೀತಿ ಮಾತನಾಡಲಿ. ಶಿವಸೇನೆ ಏಕಾಂಗಿಯಾಗಿ ಸರಕಾರ ರಚಿಸಲು ನಾನು ಕೂಡಾ ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. 
 
ಸ್ವಗೌರವವಿದ್ದಲ್ಲಿ ಬಿಜೆಪಿ ಮೈತಿಕೂಟದೊಂದಿಗೆ ಹೊರಬನ್ನಿ ಎಂದು ಸವಾಲ್ ಹಾಕಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಸ್ವಗೌರವ ಎನ್ನುವುದರ ಅರ್ಥ ಮೊದಲು ತಿಳಿದುಕೊಳ್ಳಲಿ ಎಂದು ಗುಡುಗಿದರು. 
 
ಶಿವಸೇನೆ ಪಕ್ಷಕ್ಕೆ ಸ್ವಗೌರವ ಉಳಿದಿಲ್ಲ ಎಂದು ಹೇಳಿಕೆ ನೀಡಿದ ಪವಾರ್ ಮೊದಲು ಅದರ ಅರ್ಥ ತಿಳಿದುಕೊಂಡಲ್ಲಿ ಉತ್ತಮ. ಮೊದಲು ಕಾಂಗ್ರೆಸ್ ತ್ಯಜಿಸಿದರು, ನಂತರ ಮತ್ತೆ ಸೇರ್ಪಡೆಗೊಂಡರು. ಸೋನಿಯಾ ಗಾಂಧಿ ವಿರುದ್ಧ ಹೇಳಿಕೆ ನೀಡಿ ಪಕ್ಷದಿಂದ ಹೊರಹಾಕಿಸಿಕೊಂಡರು. ಮತ್ತೂ ಕೂಡಾ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವವರಿಂದ ಪಾಠ ಕಲಿಯಬೇಕಾಗಿಲ್ಲ ಎಂದರು.
 
ಮಹಾರಾಷ್ಟ್ರ ಸರಕಾರದ ಕಾರ್ಯವೈಖರಿ ಬಗ್ಗೆ ಕೆಲ ಶಿವಸೇನೆ ಸಚಿವರು ತೃಪ್ತಿ ಹೊಂದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶಾಸಕರನ್ನು ತಮ್ಮೊಂದಿಗೆ ಕರೆದುಕೊಂಡು ಕಾರ್ಯನಿರ್ವಹಿಸಬೇಕು. ಶಾಸಕರ ಸಮಸ್ಯೆಗಳು ಜನತೆಯ ಸಮಸ್ಯೆಗಳಾಗಿರುತ್ತೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ