ಮುಂಬೈ ವಾಸಿ ವಿಕಲಚೇತನ ಯುವತಿಯನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ ಒಬಾಮಾ

ಶನಿವಾರ, 26 ಜುಲೈ 2014 (16:32 IST)
ಮುಂದಿನ ವಾರ, ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಪ್ರಪಂಚದಾದ್ಯಂತದಿಂದ ಆಯ್ಕೆ ಮಾಡಲಾದ 12 ಜನ ವಿಕಲ ಚೇತನರಿಗೆ ಶ್ವೇತ ಭವನದಲ್ಲಿ ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ವಿಶೇಷವೆಂದರೆ ಅವರಲ್ಲಿ ನಮ್ಮ ಮುಂಬೈನ ಹುಡುಗಿಯೊಬ್ಬಳು ಇದ್ದಾಳೆ. 

ಗುರ್ಗಾಂವ್ ಸಬ್ ಅರ್ಬನ್ ನಿವಾಸಿ ವಿಕಲ ಚೇತನ ಅಥ್ಲೆಟ್ ನೇಹಾ ಪಿ ನಾಯ್ಕ್ ಎಂಬ ಯುವತಿಯೇ ಭಾರತದಿಂದ ಆಹ್ವಾನಿತಳಾಗಿರುವ ಅದೃಷ್ಟಶಾಲಿಯಾಗಿದ್ದು, ವಿಶೇಷ ಒಲಿಂಪಿಕ್ಸ್ ಇಂಟರ್ನ್ಯಾಷನಲ್ ಜಾಗತಿಕ ಮೆಸೆಂಜರ್ ಆಗಿ ಆಯ್ಕೆ ಆಗಿರುವ ನೇಹಾ, 100 ಮೀಟರ್  ಓಟ ಮತ್ತು ಗುಂಡೆಸೆತದಲ್ಲಿ  ದೇಶವನ್ನು ಪ್ರತಿನಿಧಿಸಿದ್ದಾರೆ. 
 
ಶ್ವೇತಭವನದಲ್ಲಿ ಜುಲೈ 31 ರಂದು ಆಯೋಜಿಲ್ಪಟ್ಟಿರುವ ಭೋಜನಕೂಟದಲ್ಲಿ ಭಾಗವಹಿಸಲು ಅಂತಿಮ ತಯಾರಿಯಲ್ಲಿರುವ ನೇಹಾ ಈ ಕುರಿತು  ಪ್ರತಿಕ್ರಿಯಿಸಿದ್ದು ಹೀಗೆ; ಇದು ನನ್ನ ಪಾಲಿಗೆ ದೊಡ್ಡ ಗೌರವದ ವಿಷಯ.  ನನ್ನ ಜನ್ಮದಿನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ. 
 
ಮೂಲತಃ ಗೋವಾದವರಾದ ನೇಹಾ ಕುಟುಂಬ, ಈಗ ಮುಂಬೈಯಲ್ಲಿ ವಾಸವಾಗಿದೆ. 
 
ಒಬಾಮಾರ ಶ್ವೇತಭವನದಲ್ಲಿ ನಡೆಯಲಿರುವ ಈ  ವಿಶೇಷ ಭೋಜನಕೂಟದಲ್ಲಿ ನೇಹಾರ ಮಾರ್ಗದರ್ಶಿ, ಗುರು 33 ವರ್ಷದ ಜೊನಿತಾ ರೊಡ್ರಿಗ್ರೀಸ್ ಅವರ ಜತೆ ನೀಡಲಿದ್ದಾರೆ. ಅವರು ಪುನರ್ವಾಸ್ ಎಜುಕೇಶನ್ ಸೊಸೈಟಿಯ ಶ್ರೀದೇವರ್ಜಿ ಗುಂಡೆಚಾ ಪುನರ್ವಾಸ್ ವಿಶೇಷ ಶಾಲೆ ಹಾಗೂ ಮಾನಸಿಕ ವಿಕಲ ಚೇತನರ ವೃತ್ತಿಪರ ತರಬೇತಿ ಕೇಂದ್ರದಲ್ಲಿ ಶಿಕ್ಷಕಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ