ಒನ್ ರ್ಯಾಂಕ್ ಒನ್ ಪೆನ್ಶೆನ್ ಯೋಜನೆಗೆ ಅಣ್ಣಾ ಹಜಾರೆ ಬೆಂಬಲ

ಮಂಗಳವಾರ, 7 ಜುಲೈ 2015 (20:31 IST)
ಸೇನಾ ಯೋಧರ ದೀರ್ಘಾವಧಿಯಿಂದ ನೆನೆಗುದಿಯಲ್ಲಿರುವ ಒನ್ ರ್ಯಾಂಕ್ ಒನ್ ಪೆನ್ಶೆನ್ ಯೋಜನೆಗೆ ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ.
 
ಒನ್ ರ್ಯಾಂಕ್ ಒನ್ ಪೆನ್ಶೆನ್ ಯೋಜನೆ ಕುರಿತಂತೆ ಕೆಲ ಮಾಜಿ ಯೋಧರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಹಜಾರೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
 
ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜ್ ಕಡಯಾನ್ ನೇತೃತ್ವದಲ್ಲಿ ಐವರು ಮಾಜಿ ಯೋಧರು ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಶಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಒನ್ ರ್ಯಾಂಕ್ ಒನ್ ಪೆನ್ಶೆನ್ ಯೋಜನೆ ಸರಕಾರದಲ್ಲಿ ಜೀವಂತವಾಗಿದೆ. ಬಿಜೆಪಿ ಅಂತರಿಕ ವಲಯದಲ್ಲೂ ಯೋಜನೆಗೆ ಚಾವನೆ ನೀಡುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ಮಾಜಿ ಉಫ ಸೇನಾ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಶೀಘ್ರದಲ್ಲಿ ಸೇನಾಯೋಧರ ಸಮಸ್ಯೆಯನ್ನು 8 ರಿಂದ 10 ದಿನಗಳೊಳಗಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾ ಭರವಸೆ ನೀಡಿದ್ದಾರೆ ಎಂದು ನಿವೃತ್ತ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
 
ಮೂಲಗಳ ಪ್ರಕಾರ ಕೇಂದ್ರ ಹಣಕಾಸು ಸಚಿವಾಲಯ ರಕ್ಷಣಾ ಸಚಿವಾಲಯಕ್ಕೆ ಒನ್ ರ್ಯಾಂಕ್ ಒನ್ ಪೆನ್ಶೆನ್ ಯೋಜನೆಯ ದಾಖಲೆಗಳನ್ನು ವಾಪಸ್ ಕಳುಸಿದೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ