ಮತ್ತೊಬ್ಬ ಕಾಂಗ್ರೆಸ್‌ ನಾಯಕನ ಅಕ್ರಮ ಸಂಬಂಧ ಬಹಿರಂಗ

ಗುರುವಾರ, 21 ಆಗಸ್ಟ್ 2014 (18:38 IST)
ತನ್ನ ಜೊತೆ ಮಾಜಿ ಕೇಂದ್ರ ರೈಲ್ವೆ ರಾಜ್ಯ ಸಚಿವ ನಾರಾಯಣ್‌‌ ರಾಠವಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಮಹಿಳೆಯೊಳು ಆರೋಪಿಸಿದ್ದಾಳೆ. ಆದರೆ, ಇದೊಂದು ಬ್ಲ್ಯಾಕ್‌ಮೇಲಿಂಗ್‌ ತಂತ್ರವಾಗಿದೆ ಎಂದು ಮಾಜಿ ಸಚಿವರು ತಳ್ಳಿಹಾಕಿದ್ದಾರೆ. 
 
ಮಾಜಿ ಕೇಂದ್ರ ಸಚಿವ ರಾಠವಾ ಮಹಿಳೆಯ ವಯಸ್ಕ ಪುತ್ರನಿಗೆ ತಂದೆಯಾಗಿರುವ ಆರೋಪ ಸಾಬೀತುಪಡಿಸುವ (ಪಿತೃತ್ವ ಪರೀಕ್ಷೆ) ಡಿಎನ್‌ಎ ಟೆಸ್ಟ್‌ಗೆ ನಿರಾಕರಿಸಿರುವುದು ಅನುಮಾನ ಮೂಡಿಸಿದೆ. ಗುಜರಾತ್ ಹೈಕೋರ್ಟ್ ಸೆಪ್ಟೆಂಬರ್ 4 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. 
 
ಗುಜರಾತಿನ ಛೋಟಾ ಉದಯ್‌ಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಾಠವಾ(61) ತನ್ನ ಮಗನ ಅಕ್ರಮ ತಂದೆಯಾಗಿದ್ದಾರೆ ಎಂದು ಅಮರೇಲಿ ಜಿಲ್ಲೆಯ ಮಹಿಳೆಯೊಬ್ಬಳು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಳೆ.
 
ನನ್ನನ್ನು ರಾಠವಾರ ಪತ್ನಿಯೆಂದು ಒಪ್ಪಿಕೊಳ್ಳಬೇಕು ಮತ್ತು ತನ್ನ ಮಗನ ಪಿತೃತ್ವ ಪರೀಕ್ಷೆಗಾಗಿ ಮಾಜಿ ಸಚಿವರ ಡಿಎನ್‌‌‌ಎ ಟೆಸ್ಟ್‌ ಮಾಡಬೇಕೆಂದು ಕಳೆದ ವರ್ಷ ಮೇ ತಿಂಗಳಲ್ಲಿ ಅಮ್ರೇಲಿಯ ಸ್ಥಳೀಯ ನ್ಯಾಯಾಲಯದ ಮುಂದೆ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಳು. ಆದರೆ, ಸ್ಥಳೀಯ ನ್ಯಾಯಾಲಯ ದೂರನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೊರೆಹೋಗಿದ್ದಾಳೆ.  

ವೆಬ್ದುನಿಯಾವನ್ನು ಓದಿ