ಬ್ರೇಕಿಂಗ್ ನ್ಯೂಸ್ : ಹನಿ ಟ್ರ್ಯಾಫ್‌ಗೆ ಒಳಗಾದ್ರಾ ವರುಣ್ ಗಾಂಧಿ

ಗುರುವಾರ, 20 ಅಕ್ಟೋಬರ್ 2016 (16:17 IST)
ದೊಡ್ಡ ದೊಡ್ಡ ವ್ಯಕ್ತಿ, ಪ್ರತಿಷ್ಠಿತರು, ರಾಜಕಾರಣಿಗಳು ಸಹ ಹನಿ ಟ್ರ್ಯಾಫ್‌ಗೆ ಒಳಗಾಗುತ್ತಿರುವುದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಮತ್ತೀಗ ಕಮಲ ಪಾಳೆಯದ ಫೈರ್‌ಬ್ರ್ಯಾಂಡ್‌ಗಳಲೊಬ್ಬರಾದ, ನೆಹರು - ಗಾಂಧಿ ಮನೆತನದ ಕುಡಿ ವರುಣ್ ಗಾಂಧಿ ಸಹ ಹನಿ ಟ್ರ್ಯಾಫ್‌ಗೆ ಒಳಗಾಗಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಉತ್ತರ ಪ್ರದೇಶ ಚುನಾವಣೆಯನ್ನು ಮುಂದಿಟ್ಟುಕೊಂಡಿರುವ ಬಿಜೆಪಿಗೆ ತಮ್ಮ ಪ್ರಭಾವಿ ನಾಯಕ ಈ ಆರೋಪಕ್ಕೆ ಒಳಗಾಗಿರುವುದು ಮುಜುಗರವನ್ನು ತಂದಿಟ್ಟಿದೆ. 

ಶಸ್ತ್ರಾಸ್ತ್ರ ಡೀಲರ್ ಅಭಿಷೇಕ್ ವರ್ಮಾ ಎಂಬುವವರು ಸೆಪ್ಟೆಂಬರ್ 16 ರಂದು ಪ್ರಧಾನಿ ಕಾರ್ಯಾಲಯಕ್ಕೆ ಒಂದು ಪತ್ರ ಬರೆದಿದ್ದು ವರುಣ್ ಗಾಂಧಿ ವಿರುದ್ಧ ಈ ಆರೋಪ ಮಾಡಿದ್ದಾರೆ. ಶಸ್ತ್ರಾಸ್ತ್ರ ಡೀಲರ್‌ಗಳಿಂದ ಗಾಂಧಿ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದರು ಎಂದಿರುವ ವರ್ಮಾ, ಸಾಕ್ಷಿಯಾಗಿ ಸಿಡಿ ಹಾಗೂ ಹಲವು ಫೋಟೋಗಳನ್ನು ಪ್ರಧಾನಿ ಕಚೇರಿಗೆ ರವಾನಿಸಿ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 
 
ತಮ್ಮ ಮೇಲಿನ ಈ ಆರೋಪವನ್ನು ತಳ್ಳಿ ಹಾಕಿರುವ ವರುಣ್ ಗಾಂಧಿ, ಇದೆಲ್ಲ ಕಟ್ಟು ಕಥೆ. ಪ್ರತಿಕ್ರಿಯೆ ನೀಡಬೇಕಾದ ಅನಿವಾರ್ಯತೆ ನನಗಿಲ್ಲ ಎಂದಿದ್ದಾರೆ. ಪ್ರಧಾನಿ ಕಾರ್ಯಾಲಯ ಕೂಡ ಈ ಕುರಿತು ಏನನ್ನು ಪ್ರತಿಕ್ರಿಯಿಸಿಲ್ಲ.
 
ಶತಾಯಗತಾಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಪಣ ತೊಟ್ಟಿರುವ ಬಿಜೆಪಿಯನ್ನು ಹತ್ತಿಕ್ಕಲು ಮಾಡಿರುವ ಕುತಂತ್ರವಿದು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ