ಶಾಲಾ ಬಾಲಕಿ ರೇಪ್ ಪ್ರಕರಣ:ಆರೋಪಿಯ ಲ್ಯಾಪಟಾಪ್‌ನಲ್ಲಿ ಶಿಸುಕಾಮದ ದ್ರಶ್ಯಾವಳಿ

ಸೋಮವಾರ, 21 ಜುಲೈ 2014 (09:30 IST)
ನಗರದ ಮಾರತಹಳ್ಳಿಯ ಶಾಲೆಯಲ್ಲಿ ನಡೆದ ಆರು ವರ್ಷದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಪ್ರಕರಣದ ಆರೋಪಿಗಳೊಬ್ಬನಾದ  31 ವರ್ಷದ ಸ್ಕೇಟಿಂಗ್ ಬೋಧಕನನ್ನು ಬಂಧಿಸಿರುವ ಪೋಲಿಸರಿಗೆ ಆತನ ಅಪರಾಧವನ್ನು ಪುಷ್ಠೀಕರಿಸುವಂತ ಸಾಕ್ಷವೊಂದು ದೊರೆತಿದೆ.  

ಮುಖ್ಯ ಆರೋಪಿಯಾದ ಮುಸ್ತಫಾನನ್ನು ಬಂಧಿಸಲಾಗಿದ್ದು, ಆತ ಬಿಹಾರದ ಮೂಲದವನಾಗಿದ್ದು 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಆಘಾತಕಾರಿ ಸಂಗತಿ ಎಂದರೆ ಅವನ ಲ್ಯಾಪಟಾಪ್‌ನಲ್ಲಿ ಪುಟ್ಟಪುಟ್ಟ ಶಾಲಾ ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಅನೇಕ ವಿಡಿಯೋಗಳು ಕಂಡುಬಂದಿದ್ದು, ಅವುಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಇದು ಆತ ಶಿಸುಕಾಮಿ ಅನುವುದನ್ನು ಪುಷ್ಠಿಕರಿಸಿವೆ. 
 
ಮಗುವಿನ ಮೇಲೆ ಜುಲೈ 2 ರಂದು  ದೌರ್ಜನ್ಯ ನಡೆದಿದ್ದು, ಜುಲೈ 14ರಂದು ಪ್ರಕರಣ ಬೆಳಕಿಗೆ ಬಂತು. 
 
ಮುಸ್ತಫಾ ಬಳಿಯಿದ್ದ ಮೊಬೈಲ್ ಮತ್ತು ಲ್ಯಾಪಟಾಪ್‌ನಲ್ಲಿ ಮಕ್ಕಳ ಕುರಿತಾದ ಅಶ್ಲೀಲ ಚಿತ್ರಗಳಿವೆ. ಇದು ಆತನ ಮನಸ್ಥಿತಿಯನ್ನು ಬಹಿರಂಗ ಪಡಿಸಿವೆ. ಆತನನ್ನು ಸೋಮವಾರ ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ