ಬೆಲೆ ಏರಿಕೆ ಯುಪಿಎ ಸರಕಾರದ ಪಾಪದ ಕೂಸು: ಜೇಟ್ಲಿ

ಮಂಗಳವಾರ, 8 ಜುಲೈ 2014 (17:21 IST)
ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಉತ್ತರಿಸಿದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಬೆಲೆ ಏರಿಕೆ ಯುಪಿಎ ಸರಕಾರದಿಂದ ಎನ್‌ಡಿಎ ಸರಕಾರಕ್ಕೆ ಅನುವಂಶಿಕವಾಗಿ ಬಂದಿದೆ ಎಂದು ಲೇವಡಿ ಮಾಡಿದ್ದಾರೆ. 
 
ಪೂರೈಕೆ , ಸಂಗ್ರಹ ಸಾಮರ್ಥ್ಯದ ಕುರಿತು ಯುಪಿಎ ಸರಕಾರ ಮಾತನಾಡಿತ್ತು. ಆದರೆ ಅದು ನಡೆಯಲಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. 
 
ಸರಕಾರ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಮಂಡಿಸುವ ಮೂಲಕ  ಹಣಕಾಸು ಮಾರ್ಗಸೂಚಿಯ ರೂಪರೇಖೆಗಳನ್ನು ಪ್ರಸ್ತುತ ಪಡಿಸುವ ಮುನ್ನವೇ ಸರಕಾರದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಜೇಟ್ಲಿ ದೂರಿದ್ದಾರೆ. 
 
ಕಾಂಗ್ರೆಸ್ ಬಿಟ್ಟು ಹೋಗಿರುವ ಅಂತರಗಳನ್ನು ತುಂಬುವುದು ಕೇವಲ 5 ವಾರಗಳಲ್ಲಿ ಸಾಧ್ಯವಿಲ್ಲ ಎಂದು ರಾಜ್ಯಸಭೆಯ ನಾಯಕರೂ ಆಗಿರುವ ಜೇಟ್ಲಿ ಹೇಳಿದ್ದಾರೆ. 
 
"ಸರ್ಕಾರ ಹಣದುಬ್ಬರವನ್ನು  ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿ ಪರಿಗಣಿಸುವಲ್ಲಿ ಬದ್ಧವಾಗಿದೆ. ಆಲೂಗಡ್ಡೆ ಮತ್ತು ಈರುಳ್ಳಿಯ  ಸಾಕಷ್ಟು ಪೂರೈಕೆ ಇದ್ದು,  ಆದ್ದರಿಂದ ದಿಗಿಲು ಬೀಳುವ ಅಗತ್ಯವಿಲ್ಲ " ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ