ಕೇಜ್ರಿವಾಲ್ ಮೇಲೆ ಕಲ್ಲೆಸೆತ

ಭಾನುವಾರ, 28 ಡಿಸೆಂಬರ್ 2014 (11:05 IST)
ನವದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ಕಲ್ಲೆಸೆದ ಘಟನೆ ವರದಿಯಾಗಿದೆ. ದಕ್ಷಿಣ ದೆಹಲಿಯ ತಿಗಡಿ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಕೇಜ್ರಿವಾಲ್‌ಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಮತ್ತು ಕಲ್ಲೆಸೆದ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಿಲ್ಲ. ಈ ಘಟನೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಪ್ ನಾಯಕ ಆರೋಪಿಸಿದ್ದಾರೆ. 
 
ದೇವಲಿ ವಿಧಾನಸಭಾ ಕ್ಷೇತ್ರದಡಿ ಬರುವ ತಿಗಡಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ, 20ರ ಹರೆಯದ ಯುವಕ ಕೇಜ್ರಿವಾಲ್ ಮೇಲೆ ಕಲ್ಲನ್ನೆಸೆದಾಗ ಅದು ವೇದಿಕೆ ಬಳಿ ಬಿದ್ದಿದೆ. ತಕ್ಷಣ ಆಪ್ ಕಾರ್ಯಕರ್ತರು ಆತನನ್ನು ಹಿಡಿದುಕೊಂಡಿದ್ದಾರೆ. 
 
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ "ಆತಂಕಕ್ಕೆ ಒಳಗಾಗಿರುವ ಬಿಜೆಪಿ ಆ ರೀತಿಯ ಕೆಲಸಗಳಿಗೆ ಕೈ ಹಾಕುತ್ತಿದೆ" ಎಂದು ಆಪಾದಿಸಿದ್ದಾರೆ. 
 
"ಇಂದು ದೇವಲಿಯಲ್ಲಿ ನಾನು ಜನಸಭೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ನನ್ನ ಮೇಲೆ ಕಲ್ಲನ್ನೆಸೆದ. ಹೆದರಿಕೆಗೊಳಗಾಗಿರುವ ಬಿಜೆಪಿ ಹಿಂಸೆಗಿಳಿದಿದೆ. ನನ್ನ ಮೇಲೆ ಕಲ್ಲೆಸೆದ ಹುಡುಗನಿಗೆ ಒಳ್ಳೆಯದನ್ನೇ ನಾನು ಬಯಸುತ್ತೇನೆ" ಎಂದು ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ. 
 
ಯುವಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ