ಪೊಲೀಸರಿಂದ ಥಳಿತಕ್ಕೊಳಗಾದ ಕುಟುಂಬವನ್ನು ಭೇಟಿಯಾದ ಕೇಜ್ರಿವಾಲ್

ಶನಿವಾರ, 30 ಜುಲೈ 2016 (13:29 IST)
ದೆಹಲಿ ಮುಖ್ಯಮಂತ್ರಿ, ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಶುಕ್ರವಾರ, ಜುಲೈ 25 ರಂದು ಪೊಲೀಸರಿಂದ ಥಳಿತಕ್ಕೊಳಗಾದ ದಲಿತ ಇಂದರ್ ಸಿಂಗ್ ಕುಟುಂಬವನ್ನು ಭೇಟಿಯಾದರು.

ಇಂದರ್ ಸಿಂಗ್ ಸಂಬಂಧಿಕರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಆತನ ಸೋದರ ಸೊಸೆ ಸುನೀತಾ ರಾಣಿ ಒಂದು ಮಾದಕದ್ರವ್ಯಗಳ ಮತ್ತು ಸೈಕೊಟ್ರೋಫಿಕ್ ವಸ್ತುಗಳ (NDPS)ಸಾಗಾಣಿಕೆ ಆರೋಪವನ್ನು ಹೊತ್ತಿದ್ದಾಳೆ. ಸದ್ಯ ಆಕೆ ಜಾಮೀನಿನ ಮೇಲೆ ಹೊರಗಿದ್ದಾಳೆ. ಸಿಂಗ್ ಸೋದರಳಿಯ ಜೂಜಿನ ಪ್ರಕರಣದಲ್ಲಿ 2014 ರಲ್ಲಿ ಜೈಲು ಶಿಕ್ಷೆಯನ್ನು ಎದುರಿಸಿದ್ದ.

ಆದರೆ ಆಪ್, ಇಂದರ್ ಸಿಂಗ್ ಅಮಾಯಕ,  ಸಂಬಂಧಿಕರ ತಪ್ಪಿಗೆ  ಆತನಿಗೆ ಶಿಕ್ಷಿಸಬಾರದಿತ್ತು ಎಂದು ಹೇಳುತ್ತಿದೆ.

ಇಂದರ್ ಸಿಂಗ್ ಸಂಬಂಧಿಕರ ವಿರುದ್ಧ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಆದರೆ ಸಿಂಗ್ ಅಮಾಯಕ.  ಪಂಜಾಬ್‌ನ ಎಸ್ಎಡಿ - ಬಿಜೆಪಿ ಸರಕಾರ ದಲಿತ ವಿರೋಧಿ. ಕ್ಯಾನ್ಸರ್ ಪೀಡಿತ ಸಿಂಗ್ ಅವರನ್ನು ಎಷ್ಟು ಅಮಾನುಷವಾಗಿ ಥಳಿಸಲಾಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ವಾಸ್ತವವೆಂದರೆ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ಮಾದಕವಸ್ತು ದಂಧೆ ವಿರುದ್ಧ ಇಂದರ್ ಸಿಂಗ್ ಕುಟುಂಬ ವಿರೋಧ ವ್ಯಕ್ತ ಪಡಿಸಿತ್ತು. ಸಿಂಗ್ ಪರಿವಾರದ ವಿರುದ್ಧ ದಾಖಲಾಗಿರುವ ಎಫ್ಐಆರ್‌ನ್ನು ರದ್ದು ಪಡಿಸಬೇಕು ಮತ್ತು ಅವರ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ