ರಾಜೀನಾಮೆ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಬುಧವಾರ, 4 ಮಾರ್ಚ್ 2015 (14:01 IST)
ಆಮ್ ಆದ್ಮಿ ಪಕ್ಷದ ಪಕ್ಷದ ಭಿನ್ನಮತದಿಂದ ಬೇಸತ್ತಿದ್ದ ದೆಹಲಿ ಮುಖ್ಯಮಂತ್ರಿಅರವಿಂದ್ ಕೇಜ್ರಿವಾಲ್ ಕೊನೆಗೂ ಪಕ್ಷದ ರಾಷ್ಟ್ರೀಯ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
 
ಇಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನವೇ ಕೇಜ್ರಿವಾಲ್ ರಾಜೀನಾಮೆ ಸಲ್ಲಿಸಿದ್ಧಾರೆ. ಸದ್ಯ, 21 ಸದಸ್ಯರ ಆಮ್ ಆದ್ಮಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ಭಿನ್ನಮತೀಯರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಹಣೆಬರಹ ನಿರ್ಧಾರವಾಗಲಿದೆ. 
 
ಪ್ರಚಂಡ ಬಹುಮತದ ಮೂಲಕ ದೆಹಲಿ ಗದ್ದುಗೆ ಏರಿದ ಒಂದೇ ತಿಂಗಳಲ್ಲಿ ಆಮ್ ಆದ್ಮಿಯ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಕೇಜ್ರಿವಾಲ್ ಸಂಚಾಲಕ ಸ್ಥಾನ ಬಿಟ್ಟುಕೊಡುವಂತೆ ಆಗ್ರಹ ಕೇಳಿಬಂದಿತ್ತು. 
 
ಈ ಕುರಿತು, ನಿನ್ನೆ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಪಕ್ಷದ ಬೆಳವಣಿಗೆಗಳ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದರು. ಪಕ್ಷದ ಸೈದ್ಧಾಂತಿಕ ಭಿನ್ನಮತವನ್ನ ಹೆಚ್ಚಲು ಬಿಡುವುದಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. - 
 

ವೆಬ್ದುನಿಯಾವನ್ನು ಓದಿ