ಆಸಾರಾಮ್ ಬೆಂಬಲಿಗರಿಂದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ

ಶುಕ್ರವಾರ, 27 ಫೆಬ್ರವರಿ 2015 (14:56 IST)
ಲೈಂಗಿಕ ಕಿರುಕುಳ ಹಗರಣದಲ್ಲಿ ಸಿಲುಕಿದ ಸ್ವಯಂಘೋಷಿತ ದೇವಮಾನವ ಆರೋಪಿ ಆಸಾರಾಮ್ ಬೆಂಬಲಿಗರ ವರ್ತನೆ ಪೊಲೀಸ್ ಇಲಾಖೆಯನ್ನೇ ಕಂಗೆಡಿಸಿದೆ. ಆಸಾರಾಮ್‌ನನ್ನು ಇಂದು ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಿದಾಗ ನ್ಯಾಯಾಲಯದ ಹೊರಗಡೆ ಜಮಾಯಿಸಿದ್ದ ಬೆಂಬಲಿಗರು ಮಹಿಳಾ ಪೊಲೀಸ್ ಅದಿಕಾರಿಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.   
ಉತ್ತರಪ್ರದೇಶದ ಮೂಲದ ವ್ಯಕ್ತಿಯೊಬ್ಬ ಮಹಿಳಾ ಅಧಿಕಾರಿಯನ್ನು ಧಳಿಸಿದ್ದಲ್ಲದೇ ಆಕೆಯನ್ನು ತಳ್ಳಿದ್ದಾನೆ. ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕೂಡಲೇ ಮಹಿಳಾ ಪೊಲೀಸ್ ಅದಿಕಾರಿಯ ರಕ್ಷಣೆಗೆ ಧಾವಿಸಿದ್ದಾರೆ.
 
ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಲ್ಲದೇ ಮನಬಂದಂತೆ ಥಳಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  
 
ಆಸಾರಾಮ್‌ನನ್ನು ನ್ಯಾಯಾಲಯಕ್ಕೆ ಕರೆತಂದಾಗಲೆಲ್ಲಾ ಆತನ ಬೆಂಬಲಿಗರ ದಾಂಧಲೆ ನಿರಂತರವಾಗಿ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ