ಅಪಮಾನದಿಂದ ನೊಂದು ಕೆಲಸಕ್ಕೆ ರಾಜೀನಾಮೆ ನೀಡಿ ಅಧಿಕಾರಿಯಾಗುವ ಶಪಥಗೈದ ಪೇದೆ

ಸೋಮವಾರ, 1 ಫೆಬ್ರವರಿ 2016 (15:54 IST)
ಎಸ್‌ಪಿಯವರ ಮನೆಯಲ್ಲಿ ನಿರಂತರವಾಗಿ ಅಪಮಾನವನ್ನು ಎದುರಿಸಿ ರೋಸಿ ಹೋಗಿದ್ದ ಪೊಲೀಸ್ ಪೇದೆಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸರ್ಕಾರಿ ಅಧಿಕಾರಿಯಾಗುವ ಶಪಥಗೈದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 
ದಿಟ್ಟ ಪೇದೆ ಶೈಲೇಂದ್ರ ಮಿಶ್ರಾ ಅವರಿಂದ ಎಸ್‌ಪಿ ಸುಶಾಂತ್ ಕುಮಾರ್ ಪಾತ್ರೆಗಳನ್ನು ಸ್ವಚ್ಛಗೊಳಿಸುವಂತಹ ಮನೆಗೆಲೆಸಗಳನ್ನು ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಸುಶಾಂತ್ ಕುಮಾರ್ ಈ ಆರೋಪಗಳನ್ನು ಅಲ್ಲಗಳೆದಿದ್ದು ಸ್ವಇಚ್ಛೆಯಿಂದಲೇ ಅವರು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. 
 
ಅತ್ಯಂತ ಮೇಧಾವಿ ವಿದ್ಯಾರ್ಥಿಯಾಗಿದ್ದ ಶೈಲೇಂದ್ರ ರೇವಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದು ಟಾಪರ್ ಆಗಿ ತೇರ್ಗಡೆಯಾಗಿದ್ದಾನೆ. ವಾಯು ಸೇನೆ ಪರೀಕ್ಷೆ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಎರಡು ಬಾರಿ ತೇರ್ಗಡೆಯಾಗಿದ್ದರೂ ಸೇವೆಗೆ ಸೇರಿರಲಿಲ್ಲ. 
 
ಇತ್ತೀಚಿಗೆ ಅವರು ಪೊಲೀಸ್ ಪೇದೆ ಪರೀಕ್ಷೆಯನ್ನು ಪಾಸ್ ಮಾಡಿದಾಗ ಮನೆಯವರ ಒತ್ತಾಯಕ್ಕೆ ಮಣಿದು ಶಾಹ್ದೋಲ್‌ನಲ್ಲಿ ಸೇವೆಗೆ ಸೇರಿದ್ದ.
 
ನನಗೆ ಮನೆಯಲ್ಲಿ ಊಟ ಮಾಡಿ ಬಿಟ್ಟ ತಟ್ಟೆಗಳನ್ನು ಸಂಗ್ರಹಿಸಿ ತೊಳೆಯಲು ಹೇಳಲಾಗುತ್ತಿತ್ತು. ನಾನು ಅದನ್ನು ನಿರಾಕರಿಸಿದರೆ ಶಿಕ್ಷೆ ವಿಧಿಸಲಾಗುತ್ತಿತ್ತು. ಇದು ನನಗೆ ತುಂಬಾ ನೋವನ್ನುಂಟು ಮಾಡಿತು. ಅಲ್ಲಿ ಹೆಚ್ಚು ದಿನ ಕೆಲಸ ಮಾಡುವುದು ನನ್ನಿಂದಾಗಲಿಲ್ಲ. ಹೀಗಾಗಿ 17,000 ರೂಪಾಯಿಗಳನ್ನು ಕಿಟ್‌ಗಳನ್ನು ನನ್ನ ಸೀನಿಯರ್ಸ್‌ಗಳಿಗೆ ನೀಡಿ ಮರಳಿದೆ ಎನ್ನುತ್ತಾನೆ ಶೈಲೇಂದ್ರ. 
 
ಅವಮಾನವನ್ನು ಸಹಿಸುತ್ತ ಇರುವುದುಕ್ಕಿಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಉತ್ತಮ. ಉನ್ನತ ಅಧಿಕಾರಿಯಾಗಿ ನನ್ನಂತಹ ಜನರಿಗೆ ಸಹಾಯವನ್ನಾದರೂ ಮಾಡಬಹುದು ಎಂದು ಶೈಲೇಂದ್ರ ನಿರ್ಧರಿಸಿದ್ದಾನೆ. 

ವೆಬ್ದುನಿಯಾವನ್ನು ಓದಿ