ಉಪಚುನಾವಣಾ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?

ಮಂಗಳವಾರ, 16 ಫೆಬ್ರವರಿ 2016 (16:29 IST)
ವಿವಿಧ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭಾ ಚುನಾವಣಾ ಫಲಿತಾಂಶಗಳು ನಿರೀಕ್ಷಿಸಿದಂತೆಯೇ ಬಂದಿದೆ. ಮುಂದಿನ ವರ್ಷ ಚುನಾವಣೆಯನ್ನು ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಬಿಟ್ಟರೆ ಮತ್ತೆಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಆಶ್ಚರ್ಯಕಾರಿ ಫಲಿತಾಂಶಗಳು ಬಂದಿಲ್ಲ. 

 
ಮುಜಪ್ಪರ್‌ನಗರ ಮತ್ತು ದಿಯೋಬಂದ್ ವಿಧಾನಸಭಾ ಕ್ಷೇತ್ರಗಳೆರಡನ್ನು ಆಡಳಿತಾರೂಢ ಸಮಾಜವಾದಿ ಪಕ್ಷ ಕಳೆದುಕೊಂಡಿದೆ. ಮುಜಪ್ಪರ್‌ನಗರದಲ್ಲಿ ಬಿಜೆಪಿ ಗೆದ್ದರೆ, ದಿಯೋಬಂದ್ ಕಾಂಗ್ರೆಸ್ ಪಾಲಾಗಿದೆ. ಈ ಸೋಲುಗಳು ಸಮಾಜವಾದಿ ಪಕ್ಷದ ಪಾಲಿಗೆ ಉತ್ತಮ ಸುದ್ದಿಯಲ್ಲ. ಎಸ್‌ಪಿ ರಾಜ್ಯದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವುದು ಈಗಾಗಲೇ ರುಜುವಾತಾಗುತ್ತಿದೆ. ಕೇವಲ ಬಿಕಾಪುರದಲ್ಲಿ ಮಾತ್ರ ಗೆಲುವನ್ನು ಸಾಧಿಸಲು ಎಸ್‌ಪಿ ಶಕ್ತವಾಗಿದೆ. 
 
ಕರ್ನಾಟಕದಲ್ಲಿ ಇಂದು ಉಪಚುನಾವಣಾ ಫಲಿತಾಂಶ ಬಂದಿದ್ದು ಆಡಳಿತಾರೂಢ ಕಾಂಗ್ರೆಸ್ ಬೀದರ್‌ನಲ್ಲಿ ಗೆದ್ದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಗೆಲುವಿನ ರುಚಿ ಕಂಡಿದೆ. ಹೆಬ್ಬಾಳ ಕ್ಷೇತ್ರವನ್ನು ಕಳೆದುಕೊಂಡಿರುವುದು ಕಾಂಗ್ರೆಸ್‌ಗೆ ಶಾಕ್ ತಂದಿದೆ. 
 
ಮಾಜಿ ಕೇಂದ್ರ ಸಟಿವ ಜಾಫರ್ ಶರೀಫ್ ಮೊಮ್ಮಗ ಸಿ.ಕೆ. ರೆಹಮಾನ್ ಪ್ರತಿಷ್ಠಿತ ಹೆಬ್ಬಾಳ ಕ್ಷೇತ್ರದಲ್ಲಿ ಬಹುದೊಡ್ಡ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ. ಮೂಲತಃ ಕೋಲಾರದವರಾಗಿದ್ದುಕೊಂಡು ಬೆಂಗಳೂರು ನಗರದಲ್ಲಿ ಬರುವ ಹೆಬ್ಬಾಳದಲ್ಲಿ ಗೆದ್ದು ಬಿದೆಪಿ ಅಭ್ಯರ್ಥಿ ಅಚ್ಚರಿಗೆ ಕಾರಣರಾಗಿದ್ದಾರೆ. 
 
ದೇವದುರ್ಗದಲ್ಲಿ ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ್  ಮತ್ತು ಬೀದರ್‌ನಲ್ಲಿ ಕಾಂಗ್ರೆಸ್ ಗೆಲುವನ್ನು ಕಂಡಿದೆ. 
 
ಉಪಚುನಾವಣೆಗೆ ಮೊದಲು ಸಹ ಈ ಮೂರು ಕ್ಷೇತ್ರಗಳಲ್ಲಿ ಒಂದು ಕಾಂಗ್ರೆಸ್‌ನದಾಗಿತ್ತು ಮತ್ತು ಎರಡು ಬಿಜೆಪಿಯದಾಗಿದ್ದವು.  
 
ಹೆಬ್ಬಾಳ ಅಭ್ಯರ್ಥಿ ತಮ್ಮ ಪಾಳಯದವರಲ್ಲದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲಿಗೆ ಜಾಫರ್ ಶರೀಫ್ ಅವರನ್ನು ದೂರಬಹುದು. 

ವೆಬ್ದುನಿಯಾವನ್ನು ಓದಿ