ಪಿಎಸ್ಎಲ್ವಿ- ಸಿ30 ರಾಕೆಟ್ ಆಸ್ಟ್ರೋಸ್ಯಾಟ್ ಜತೆಗೆ ಇಂಡೋನೇಷ್ಯಾ ಮತ್ತು ಕೆನಡಾದ ತಲಾ ಒಂದು ಉಪಗ್ರಹ ಮತ್ತು ಅಮೆರಿಕದ ನಾಲ್ಕು ಪುಟ್ಟ ಉಪಗ್ರಹಗಳನ್ನು ಹೊತ್ತೂಯ್ದಿದೆ. 2008ರಲ್ಲಿ ಇಸ್ರೋ ಗರಿಷ್ಠ 10 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. 7 ಉಪಗ್ರಹಗಳನ್ನು ಉಡ್ಡಯನ ಮಾಡುತ್ತಿರುವುದು 3ನೇ ಬಾರಿ. ಇದರೊಂದಿಗೆ 51 ವಿದೇಶಿ ಉಪಗ್ರಹ ಉಡಾವಣೆಗೊಳಿಸಿದ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಿದೆ. ವಾಣಿಜ್ಯ ಉದ್ದೇಶದಿಂದ ಇಸ್ರೋ ಇದುವರೆಗೆ 19 ದೇಶಗಳ 45 ಉಪಗ್ರಹಗಳನ್ನು ಉಡ್ಡಯನ ಮಾಡಿದೆ. ಈ ಮೂಲಕ 640 ಕೋಟಿ ರೂ. ಆದಾಯ ಗಳಿಸಿದೆ. 2007ರಲ್ಲಿ ಇಸ್ರೋ ಮೊದಲ ಬಾರಿಗೆ ಇಟಲಿಯ ಉಪಗ್ರಹವೊಂದನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.