ಯೋಧನ ಶವಪೆಟ್ಟಿಗೆ ಎದುರು ಜಯಲಲಿತಾ ಫೋಟೋ

ಗುರುವಾರ, 18 ಫೆಬ್ರವರಿ 2016 (10:56 IST)
ಹುತಾತ್ಮ ಯೋಧನ ಶವಪೆಟ್ಟಿಗೆ ಎದುರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಫೋಟೋ ಇರಿಸುವ ಮೂಲಕ ಎಐಎಡಿಎ೦ಕೆ ತೀವ್ರ ಟೀಕೆಗೆ ಗುರಿಯಾಗಿದೆ. 

ಸಿಯಾಚಿನ್‍‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟ ಯೋಧ ಜಿ. ಗಣೀಶನ್ ಅವರ ಅ೦ತಿಮದಶ೯ನಕ್ಕೆ ನಿನ್ನೆ ಮುಂಜಾನೆ ಮಧುರೈನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಗೌರವ ಸಲ್ಲಿಸಲು ಸಕಾ೯ರದ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ಸೆಲ್ಲೂರು ರಾಜು ಯೋಧನ ಕುಟುಂಬದವರಿಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾ೦ತರಿಸಿದರು. ಬಳಿಕ 10 ಲಕ್ಷ ರೂಪಾಯಿ ನೀಡಿದ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬುದು ಎಲ್ಲರಿಗೂ ಬಹಿರಂಗವಾಗಬೇಕು ಎಂಬ ಅರ್ಥದಲ್ಲಿ  ಶವಪೆಟ್ಟಿಗೆಯೆದುರು ಜಯಲಲಿತಾ ಫೋಟೋ ಇರಿಸಿ ಮೃತ ಯೋಧನ ತಾಯಿಗೆ ಅವರೇ ಹಣವನ್ನು ನೀಡಿದವರು ಎಂದು ತೋರಿಸಿದರು. ಅಂತಹ ನೋವಿನಲ್ಲಿಯೂ ಆ ಮುಗ್ಧ ತಾಯಿ ಕೈಜೋಡಿಸಿ ಧನ್ಯವಾದ ಸಲ್ಲಿಸಿದರು. ಆದರೆ ಸಚಿವರ ಈ ಕ್ರಮ ಭಾರಿ ಖಂಡನೆ, ಟೀಕೆಗೆ ಗುರಿಯಾಗಿದೆ.
 
ಇದು ಅಸಂವೇದನಶೀಲ ಮತ್ತು ನಾಚಿಕೆಗೇಡಿನ ಕೃತ್ಯ ಎಂದು ಸ್ಥಳೀಯರಾದ ಪ್ರೇಮ್ ಎನ್ನುವವರು ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ