ಸಾಧಕರಿಗೆ ಅಸಾಧ್ಯವೆಂಬುದಿಲ್ಲ: ವಾಚ್‌ಮೆನ್ ಆಗಿದ್ದವ ಈಗ ಅದೇ ಕಾಲೇಜಿನ ಪ್ರಿನ್ಸಿಪಾಲ್

ಸೋಮವಾರ, 2 ಫೆಬ್ರವರಿ 2015 (16:39 IST)
ನೀವು ಪ್ರತಿದಿನ ಹಾಸಿಗೆ ಬಿಟ್ಟು ಮೇಲೆದ್ದಾಗ ನಿಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದು ನೀವು ಮತ್ತೆ ಮುಸುಕೆಳೆದು ಮಲಗಿ ಕನಸು ಕಾಣುವುದು ಅಥವಾ ಕಂಡ ಕನಸುಗಳ ಬೆನ್ನು ಹತ್ತಿ ಓಡುವುದು. ಈ ವ್ಯಕ್ತಿ ಎರಡನೆಯದನ್ನು ಆಯ್ಕೆ ಮಾಡಿಕೊಂಡ ಮತ್ತು ಇತರರಿಗೆ ಅಸಾಧ್ಯವೆನಿಸಿದ್ದನ್ನು ತಾನು ಸಾಧಿಸಿ ತೋರಿಸಿದ. 
 
ಈಶ್ವರ್ ಸಿಂಗ್ ಠಾಕೂರ್ ಬಿಲಾಸ್ಪುರದ ಗುಥಿಯಾದ ನಿವಾಸಿ. ಇಂದು ಆತ ಸ್ಥಳೀಯ ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್. ಈ ಹಿಂದೆ ಅದೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ನಿಲ್ಲಿಸುತ್ತಿದ್ದ ಸೈಕಲ್ ಕಾಯಲು ಕಾವಲುಗಾರನಾಗಿ ಆತ ಕೆಲಸಕ್ಕೆ ಸೇರಿಕೊಂಡಿದ್ದ. ಈಗ 25 ವರ್ಷಗಳ ನಂತರ ಅದೇ ಕಾಲೇಜಿನ ಪ್ರಾಚಾರ್ಯರ ಸೀಟಲ್ಲಿ ಆಸೀನನಾಗಿದ್ದಾನೆ. 
 
ಇದೆಲ್ಲ ಕೇವಲ ರಾತ್ರಿ ಕಳೆದು ಬೆಳಕಾಗುವುದರೊಳಗೆ ನಡೆದ ಬದಲಾವಣೆಯಲ್ಲ. ಬಯಸದೇ ಬಂದ ಅದೃಷ್ಟವಲ್ಲ. ಈ ಯಶಸ್ಸಿನಲ್ಲಿ ಇರುವುದು ಈಶ್ವರ್ ಅವರ ಕಠಿಣ ಪರಿಶ್ರಮ, ಸಾಧಿಸುವ ಛಲ. 
 
ಮಹಾತ್ವಾಕಾಂಕ್ಷಿಯಾಗಿದ್ದ ಈಶ್ವರ್ ಶಾಲಾ ದಿನಗಳಲ್ಲಿಯೇ ಓದುವ ಅದಮ್ಯ ಆಸೆಯನ್ನು ಈಡೇರಿಸಿಕೊಳ್ಳಲು ದುಡಿಯಲು ಪ್ರಾರಂಭಿಸಿದ್ದ. 
Ishwa
1986ರಲ್ಲಿ ಕಲ್ಯಾಣ ಕಾಲೇಜಿನಲ್ಲಿ ಕಾವಲುಗಾರನಾಗಿ ಸೇರಿಕೊಂಡ ಈಶ್ವರ್ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿ 1991ರಲ್ಲಿ ಎಮ್ಎ ಪಾಸ್ ಮಾಡಿದ . 1992ರಲ್ಲಿ ಕಾಲೇಜು ಉಪನ್ಯಾಸಕನಾಗಿ ವೃತ್ತಿ ಆರಂಭಿಸಿ 1993ರಲ್ಲಿ ಎಮ್ಎಡ್ ಪದವೀಧರನಾದ. ಇತರ ಶಿಕ್ಷಕರೊಂದಿಗೆ ಹಣಕಾಸು ಸಹಾಯ ಪಡೆದು  1995ರಲ್ಲಿ ರಾಜ್ಯಶಾಸ್ತ್ರದಲ್ಲಿ ಎಮ್ಎ ಮತ್ತು 2011ರಲ್ಲಿ ಹಿಂದಿಯಲ್ಲಿ ಎಮ್ಎ ಮಾಡಿ 2014ರಲ್ಲಿ ಪಿಎಚ್‌ಡಿ ಪದವಿಯನ್ನು ತನ್ನದಾಗಿಸಿಕೊಂಡ.
 
ಈಗ ತಾನು ಈ ಹಿಂದೆ ಕಾವಲುಗಾರನಾಗಿ ಕೆಲಸ ಮಾಡಿದ್ದ ಕಾಲೇಜಿನಲ್ಲಿ ಈಶ್ವರ್ ಪ್ರಿನ್ಸಿಪಾಲ್.
 
ನಿಜವಾಗಿಯೂ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರವಿದ್ದರೆ ಏನು ಬೇಕಾದರೂ ಸಾಧಿಸಿಬಹುದು ಎನ್ನುವುದಕ್ಕೆ ಜೀವಂತ ಸಾಕ್ಷಿ ಡಾ. ಈಶ್ವರ್ ಸಿಂಗ್ ಠಾಕೂರ್.

ವೆಬ್ದುನಿಯಾವನ್ನು ಓದಿ