ಪ್ರಧಾನಿ ಮೋದಿ ಲಾಹೋರ್‌ನಲ್ಲಿ ದಾವೂದ್‌ನನ್ನು ಭೇಟಿ ಮಾಡಿರಬಹುದು: ಆಜಂಖಾನ್

ಭಾನುವಾರ, 7 ಫೆಬ್ರವರಿ 2016 (11:19 IST)
ವಿವಾದಗಳಿಗಾಗಿ ಖ್ಯಾತಿ ಪಡೆದ ಉತ್ತರಪ್ರದೇಶದ ಸಚಿವ ಆಜಂ ಖಾನ್, ಪ್ರಧಾನಿ ನರೇಂದ ಮೋದಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಲಾಹೋರ್‌ನಲ್ಲಿ ಭೇಟಿಯಾಗಿದ್ದಾಗ ಭೂಗತ ದೊರೆ ದಾವುದ್ ಇಬ್ರಾಹಿಂ ನನ್ನು ಭೇಟಿಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
 
ಏತನ್ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡಾ ಆಜಂ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅನಧಿಕೃತವಾಗಿ ಪಾಕಿಸ್ತಾನಕ್ಕೆ ತೆರಳಿ ಅಂತಾರಾಷ್ಟ್ರೀಯ ನಿಯಮಗಳನ್ನು ಮುರಿದಿದ್ದಾರೆ.ಪಾಕಿಸ್ತಾನದಲ್ಲಿ ದಾವೂದ್‌ನನ್ನು ಭೇಟಿ ಮಾಡಿದ್ದಾರೆ. ಅವರಿಗೆ ಭೇಟಿಯ ಹಿಂದಿನ ವಕ್ತಗಳು ಯಾರು ಎನ್ನುವುದು ನನಗೆ ಗೊತ್ತಿದೆ.ಒಂದು ವೇಳೆ, ಮೋದಿ ದಾವೂದ್‌ನನ್ನು ಭೇಟಿಯಾಗಿಲ್ಲ ಎಂದು ಹೇಳಲಿ ನಾನು ಸಾಕ್ಷ್ಯ ಕೊಡುತ್ತೇನೆ ಎಂದು ಹೇಳಿದ್ದಾರೆ.  
 
ಕಳೆದ ಡಿಸೆಂಬರ್ 25 ರಂದು ಪ್ರಧಾನಿ ಮೋದಿ ನವಾಜ್ ಷರೀಫ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಷರೀಫ್ ಮತ್ತು ಅವರ ತಾಯಿ ಹಾಗೂ ಪುತ್ರಿಯರು ಮತ್ತು ದಾವೂದ್ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ.
 
ಮನಬಂದಂತೆ ಆರೋಪ ಮಾಡುತ್ತಿರುವ ಉತ್ತರಪ್ರದೇಶದ ಸಚಿವ ಆಜಂಖಾನ್‌ರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡಲೇ ವಜಾಗೊ ಳಿಸಬೇಕು ಎಂದು ಬಿಜೆಪಿ ಮುಖಂಡ ಸುಧಾಂಶು ಮಿತ್ತಲ್ ಒತ್ತಾಯಿಸಿದ್ದಾರೆ. 
 
ಕಾಂಗ್ರೆಸ್ ವಕ್ತಾರ ಟೊಮ್ ವಡಕ್ಕನ್ ಮಾತನಾಡಿ, ಖಾನ್ ದೀರ್ಘಾವಧಿಯಿಂದ ಸಾರ್ವಜನಿಕ ಜೀವನದಲ್ಲಿದ್ದು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ