ಆರ್‌ಎಸ್ಎಸ್‌ನ್ನು ತುಂಡು ತುಂಡು ಮಾಡಲು ಒಂದಾಗಿ: ಮುಸಲ್ಮಾನರಿಗೆ ಆಜಂ ಕರೆ

ಬುಧವಾರ, 6 ಮೇ 2015 (12:09 IST)
ಸದಾ ವಿವಾದಾತ್ಮಕ ಹೇಳಿಕೆಗಳಿಂದ ಗುರುತಿಸಲ್ಪಪಡುವ ಉತ್ತರಪ್ರದೇಶದ ಸಚಿವ ಆಜಂ ಖಾನ್ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ  ಪ್ರಹಾರ ನಡೆಸಿದ್ದಾರೆ. ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು "ಮುಸಲ್ಮಾನರೆಲ್ಲರೂ ಒಂದಾಗಿ ಆರ್‌ಎಸ್ಎಸ್‌ನ್ನು ತುಂಡು ತುಂಡು ಮಾಡಬೇಕಾದ ಸಮಯ ಸಮೀಪಿಸಿದೆ. ಆರ್‌ಎಸ್ಎಸ್‌ನ್ನು ಆರ್. ಎಸ್. ಎಸ್. ಆಗಿ ಕತ್ತರಿಸಿ ಹಾಕಬೇಕು. ಮುಸಲ್ಮಾನರೆಲ್ಲರೂ ಒಂದಾಗಿ ಸಾಂಪ್ರದಾಯಿಕ ಶಕ್ತಿಗಳನ್ನು ಕೊನೆಗಾಣಿಸೋಣ", ಎಂದು ಕರೆ ನೀಡಿದ್ದಾರೆ. 

ದೇಶ ವಿಭಜನೆ ಕುರಿತಂತೆ ಸಹ ವಿವಾದಾತ್ಮಕ ಹೇಳಿಕೆ ನೀಡಿರುವ ಅವರು "ಭಾರತ -ಪಾಕಿಸ್ತಾನ ವಿಭಜನೆಯಾದ ಬಳಿಕ ಇಂದು ಭಾರತದಲ್ಲಿರುವ ಮುಸಲ್ಮಾನರು ಪಶ್ಚಾತಾಪ ಪಡುತ್ತಿದ್ದಾರೆ. ವಿಭಜನೆಯ ಸಂದರ್ಭದಲ್ಲಿ ನಾವು ಭಾರತದಲ್ಲೇ ಉಳಿಯಲು ಮಾಡಿದ ನಿರ್ಧಾರ ಸರಿ ಇದೆಯೇ? ಎಂದು ಅವರು ಯೋಚಿಸುವಂತಾಗಿದೆ. ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಓಡುತ್ತಿದ್ದ ಮುಸಲ್ಮಾನರಿಗೆ ಬಾಪೂಜಿ ಮತ್ತು  ಅಬ್ದುಲ್ ಕಲಾಂ ಆಜಾದ್ ಅವರ ಧ್ವನಿ ತಡೆದು ನಿಲ್ಲಿಸಿತು.ಆದರೆ ಇಂದು ರಾಜಕಾರಣ ಮಾಡುತ್ತಿರುವವರು  ಪಾಕಿಸ್ತಾನಕ್ಕೆ ಹೋದವರು ಅಲ್ಲಿಯವರೇ ಆಗಿ ಹೋಗಿದ್ದಾರೆ, ಇಲ್ಲಿರುವವರ ಮೇಲೆ ನಂಬಿಕೆ ಇಡಬೇಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇಲ್ಲಿರುವ ಮುಸಲ್ಮಾನರು ತಾವು ಹಿಂದೂಸ್ತಾನದಲ್ಲಿ ಇರುವ ನಿರ್ಧಾರ ಮಾಡಿ ತಪ್ಪು ಮಾಡಿಬಿಟ್ಟೆವಾ ಎಂದು ಯೋಚಿಸುವಂತಾಗಿದೆ", ಎಂದು ಆಜಂ ಖಾನ್ ಹೇಳಿದ್ದಾರೆ.
 
ಆಜಂ ಹೇಳಿಕೆಗೆ  ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕರಾದ ಸಂಗೀತ್ ಸೋಮ್, "ಆಜಂ ಅವರಿಗೆ ಭಾರತದಲ್ಲಿರಲು ಅಷ್ಟೊಂದು ಕಷ್ಟವೆನಿಸುತ್ತಿದ್ದರೆ ಪಾಕಿಸ್ತಾನಕ್ಕೆ ಹೊರಟು ಹೋಗಲಿ", ಎಂದು ಕಿಚಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ