ರಾಷ್ಟ್ರಪತಿ ಭವನ, ಸಂಸತ್ ಭವನ, ತಾಜ್ ಮಹಲ್ ನೆಲಸಮಗೊಳಿಸಬೇಕಂತೆ, ಯಾಕೆ ಗೊತ್ತಾ?

ಸೋಮವಾರ, 22 ಫೆಬ್ರವರಿ 2016 (16:39 IST)
ಸದಾ ವಿವಾದಗಳಿಂದಲೇ ಸುದ್ದಿಯಾಗುವ ಉತ್ತರ ಪ್ರದೇಶದ ಕ್ಯಾಬಿನೇಟ್ ಸಚಿವ, ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಹೊಸದೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ರಾಷ್ಟ್ರಪತಿ ಭವನ, ಸಂಸತ್ ಭವನ ಮತ್ತು ವಿಶ್ವ ವಿಖ್ಯಾತ ಪ್ರೇಮ ಸ್ಮಾರಕ ತಾಜ್ ಮಹಲ್‌ಗಳನ್ನು ನಾಶಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
 
ರಝಾ ಪದವಿ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು ರಾಷ್ಟ್ರಪತಿ ಭವನ, ಸಂಸತ್ ಭವನ ಮತ್ತು ತಾಜ್ ಮಹಲ್‌ಗಳು ಗುಲಾಮಗಿರಿಯ ಸಂಕೇತಗಳಾಗಿವೆ. ಅದಕ್ಕೆ ಅವುಗಳನ್ನು ಕೆಡವಬೇಕು ಎಂದು  ತಮ್ಮ ವಾದಕ್ಕೆ ಕಾರಣವನ್ನು ನೀಡಿದ್ದಾರೆ. 
 
ತಾಜ್ ಮಹಲ್‌ನಂತಹ ದೊಡ್ಡ ಸ್ಮಾರಕಗಳಿಗೆ ಹಣ ವ್ಯಯಿಸುವುದು ಸಾರ್ವಜನಿಕ ಧನದ ದುಂದುವೆಚ್ಚ ಎಂದು ಆಜಂ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
 
ಗುಲಾಮಗಿರಿಯ ಸಂಕೇತಗಳನ್ನು ಗುರುತಿಸುವುದಾದರೆ ಮೊದಲನೆಯ ಸ್ಮಾರಕ ತಾಜ್ ಮಹಲ್. ಬ್ರಿಟಿಷರು ನಿರ್ಮಿಸಿರುವ ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನಗಳು ಸಹ ಇದೇ ಸಾಲಿನಲ್ಲಿ ಬರುತ್ತವೆ. ಅವುಗಳೆಲ್ಲವನ್ನು ನೆಲಸಮಗೊಳಿಸಬೇಕು ಎಂದು ಖಾನ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ