ಬಾಬಾ ರಾಮದೇವ್ ವಿರುದ್ಧ 1000 ಕೋಟಿ ರೂ ಮಾನನಷ್ಟ ಮೊಕದ್ದಮೆ

ಶನಿವಾರ, 10 ಮೇ 2014 (08:47 IST)
ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ವಿರುದ್ಧ ಹೇಳಿಕೆಗಳನ್ನು ನೀಡುತ್ತ, ದಲಿತ ವಿರೋಧಿ ಮಾತುಗಳನ್ನು ಆಡಿದ್ದ ಯೋಗ ಗುರು ಬಾಬಾ ರಾಮದೇವ್ ಅವರಿಂದ, 1,000 ಕೋಟಿ ಪರಿಹಾರ ಕೋರಿ ಸರ್ಕಾರೇತರ ಸಂಸ್ಥೆಯೊಂದು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.
 
ಪ್ರಸಕ್ತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ರಾಮದೇವ್ ಕಳೆದ ತಿಂಗಳ ಕೊನೆಯಲ್ಲಿ ರಾಹುಲ್ ಗಾಂಧಿಯನ್ನು ಟೀಕಿಸುತ್ತ, ಅವರು ಹನಿಮೂನ್ ಮತ್ತು ಪಿಕನಿಕ್ ಆಚರಿಸಲು ದಲಿತರ ಮನೆಗಳಿಗೆ ಹೋಗುತ್ತಾರೆ ಎಂದು ಹೇಳಿದ್ದರು. ಇದು ಬಾಬಾ ವಿರುದ್ಧ ದಲಿತರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.

ಅಂಬೇಡ್ಕರ್ ಕಾರವಾನ್ ಎಂಬ ಸ್ವಯ್ಂ ಸೇವಾ ಸಂಸ್ಥೆಯ ಅಧ್ಯಕ್ಷ ರತ್ನ ವೋರಾ,ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿರುವ ದೂರಿನ ಅನುಸಾರ "ರಾಮದೇವ್ ದಲಿತ ಸಮುದಾಯಕ್ಕೆ, ವಿಶೇಷವಾಗಿ ದಲಿತ ಮಹಿಳೆಯರ ವಿರುದ್ಧ ಮಾನನಷ್ಟಕರ ಪದಗಳನ್ನು ಬಳಸಿದ್ದಾರೆ. ಹೀಗಾಗಿ ನಾವು 1000 ಕೋಟಿ ಪರಿಹಾರದ ಬೇಡಿಕೆ ಇಟ್ಟಿದ್ದು ಸಮಂಜಸವಾಗಿದೆ" ಎಂದು ಹೇಳಿದ್ದಾರೆ.

"ಜನಗಣತಿ ಪ್ರಕಾರ ನಮ್ಮ ದೇಶದಲ್ಲಿ 28 ಕೋಟಿ ದಲಿತರಿದ್ದಾರೆ.  ಇಡೀ ಸಮುದಾಯಕ್ಕೆ ಆಗಿರುವ ಹಾನಿಗೆ ಬಾಬಾರವರನ್ನು ಜವಾಬ್ದಾರರನ್ನಾಗಿಸ ಬೇಕು. ಈ ಪರಿಹಾರ ಮೊತ್ತವನ್ನು ಈಡೀ ದೇಶದಲ್ಲಿರುವ ಸಂಪೂರ್ಣ ದಲಿತ ಸಮುದಾಯದ ಕಲ್ಯಾಣಕ್ಕೆ ಬಳಸಿಕೊಳ್ಳಲಾಗುವುದು" ಎಂದು ರತ್ನ ವೋರಾ ತಿಳಿಸಿದ್ದಾರೆ.
 
ಕಳೆದ ತಿಂಗಳು ರಾಹಲ್ ಗಾಂಧಿ ಕುರಿತು ವ್ಯಂಗ್ಯವಾಡುತ್ತ ಬಾಬಾ "ಪಿಕನಿಕ್ ಮತ್ತು ಹನಿಮೂನ್ ಆಚರಿಸಲು ದಲಿತರ ಮನೆಗಳಿಗೆ ಹೋಗುತ್ತಾರೆ. ಅದರ ಬದಲು ದಲಿತ ಕನ್ಯೆಯ ಜತೆ ವಿವಾಹವಾದರೆ ಅವರ ಅದೃಷ್ಟ ಬದಲಾಗಿ ಅವರು ಪ್ರಧಾನಿಯಾಗಬಹುದು" ಎಂದು ಹೇಳಿದ್ದರು. ಅವರ ಈ ಮಾತಿಗೆ ಪ್ರತಿಕ್ರಿಯೆಯಾಗಿ ವ್ಯಾಪಕ ಖಂಡನೆ, ಧರಣಿಗಳು ನಡೆದಿದ್ದವು. ಆನಂತರ ತಮ್ಮ ಟಿಪ್ಪಣಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ಬಾಬಾ "ನನ್ನ ಮಾತಿಗೆ ತಪ್ಪು ಅರ್ಥ ಕಲ್ಪಿಸಲಾಗಿದೆ" ಎಂದು ಹೇಳಿದ್ದರು.  

ವೆಬ್ದುನಿಯಾವನ್ನು ಓದಿ