ಬಾಬಾ ರಾಮ್‌ದೇವ್ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ: ಅಜಂ ಖಾನ್

ಶುಕ್ರವಾರ, 2 ಮೇ 2014 (09:33 IST)
ತಾವು ಚುನಾವಣಾ ಪ್ರಚಾರದಲ್ಲಿ  ತೊಡಗಲು ಆರಂಭಿಸಿದ ದಿನಗಳಿಂದ ಸದಾ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ಬಾಬಾ ರಾಮ್‌ದೇವ್ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ ಎನ್ನುವ ಮೂಲಕ ಮತ್ತೊಂದು ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. 
 
''ದಲಿತ ಮಹಿಳೆಯರ ಬಗ್ಗೆ  ಬಾಬಾ ಹೇಳಿಕೆ ಖಂಡನಾರ್ಹ. ಹೆಂಗಸರ ವೇಷ ತೊಟ್ಟು ಅವರು ರಾಮಲೀಲಾ ಮೈದಾನದಿಂದ ಹೊರ ಹೋದರು. ಅವರಿಗೆ ಧೈರ್ಯವಿದ್ದರೆ ಅವರು ಈ ರೀತಿಯಲ್ಲಿ ವರ್ತಿಸುತ್ತಿರಲಿಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲು ಹೆಂಗಸರ ವೇಷ ತೊಟ್ಟು  ಪಲಾಯನ ಮಾಡುವವರಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ. ಇಂಥವರ ಸಮರ್ಥನೆ ಪಡೆಯುವ ಬಿಜೆಪಿಯ ಟೊಳ್ಳುತನ ಈ ಮೂಲಕ ಬಯಲಾಗಿದೆ'' ಎಂದು ಅಜಂಖಾನ್ ಹೇಳಿದ್ದಾರೆ.   
 
ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಅಜಂಖಾನ್‌ರನ್ನು ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸದಂತೆ ಕಳೆದ ತಿಂಗಳು ಚುನಾವಣಾ ಆಯೋಗ ನಿಷೇಧ ಹೇರಿತ್ತು. ನರೇಂದ್ರ ಮೋದಿ ಆಪ್ತ ಅಮಿತ್ ಶಾರವರನ್ನು ಸಹ ಪ್ರಚಾರ ನಡೆಸದಂತೆ ತಡೆದಿದ್ದ ಆಯೋಗ ಅವರು ಕ್ಷಮೆ ಕೇಳಿದ ನಂತರ ಅವರ ಮೇಲಿನ ಕ್ರಮವನ್ನು ಹಿಂತೆಗೆದು ಕೊಂಡಿತ್ತು. 
 
ಶಾ ಮೇಲಿನ ಕ್ರಮವನ್ನು ರದ್ದುಗೊಳಿಸಿ ತನ್ನ ಮೇಲಿನ ಕ್ರಮವನ್ನು ಸಡಲಿಸಿದ  ಆಯೋಗದ  ಕುರಿತು ಕೆಂಡಾಮಂಡಲರಾಗಿರುವ ಖಾನ್ ಮಾನವತ್ವವನ್ನು ಹತ್ಯೆಗೈದಾತನಿಗೆ (ಅಮಿತ್ ಷಾ) ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಲು ಅನುಮತಿ ನೀಡಲಾಗಿದೆ. ಆದರೆ ನಾನು ಮುಸ್ಲಿಂ ಎಂಬ ಕಾರಣಕ್ಕೆ ಚುನಾವಣಾ ಆಯೋಗ ನನ್ನ ವಿರುದ್ಧ ಕ್ರಮ ಕೈಗೊಂಡಿದೆ,'' ಎಂದು ಆರೋಪಿಸಿದ್ದಾರೆ.

ಪ್ರಚಾರ ನಡೆಸದಂತೆ ಹೇರಿದ್ದ ನಿಷೇಧವನ್ನು ಟೀಕಿಸಿದ್ದಕ್ಕೆ ಖಾನ್ ಅವರಿಗೆ ಆಯೋಗ ಏ. 23 ರಂದು ಹೊಸ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 

ವೆಬ್ದುನಿಯಾವನ್ನು ಓದಿ