ಮತಾಂತರ ಮಾಡಿದ್ದಕ್ಕೆ ಕೇಶಮುಂಡನ, ಚಪ್ಪಲಿ ಹಾರ

ಶನಿವಾರ, 30 ಜನವರಿ 2016 (13:07 IST)
ಮೂರು ಜನ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿ ಗೋಮಾಂಸ ತಿನ್ನಿಸಿದ್ದಾರೆಂದು ಆರೋಪಿಸಿ ಬಜರಂಗ ದಳದ ಕಾರ್ಯಕರ್ತರು ವ್ಯಕ್ತಿಯೊಬ್ಬನ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಬೀದಿ-ಬೀದಿಗಳಲ್ಲಿ ಮೆರವಣಿಗೆ ಮಾಡಿದ ಘಟನೆ ಉತ್ತರ ಪ್ರದೇಶದ ಓರಾದಲ್ಲಿ ನಡೆದಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿದೆ. ಬಜರಂಗ ದಳದ ಇಬ್ಬರು ಕಾರ್ಯಕರ್ತರು ಮತ್ತು ಪೀಡಿತ ಅವಧೇಶ್ ಸವಿತಾ ಮತ್ತು ನಡೆದ ಪ್ರಕರಣದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಝಾನ್ಸಿ ವಿಭಾಗದ ಡಿಐಜಿ ಶರದ್ ಸಚಾನ್ ತಿಳಿಸಿದ್ದಾರೆ.
 
ಶುಕ್ರವಾರ ಸುಮಾರು ಬಜರಂಗ ದಳದ ಕಾರ್ಯಕರ್ತರೆನ್ನಲಾದ 200 ಜನರ ಗುಂಪು ರಂದರ್ ಜಿಲ್ಲೆಯಲ್ಲಿರುವ ಅವದೇಶ್ ಮನೆಗೆ ನುಗ್ಗಿ ಅವರನ್ನು ಹೊರಗೆಳೆದು ತಂದರು. ಬಳಿಕ ಅವರ ತಲೆ, ಮೀಸೆ, ಹುಬ್ಬು ಬೋಳಿಸಿ, ಚಪ್ಪಲಿ ಹಾರ ಹಾಕಿ ನಗರದಾದ್ಯಂತ ಮೆರವಣಿಗೆ ಮಾಡಿಸಿದ್ದಾರೆ. 3 ಜನ ಹಿಂದೂಗಳನ್ನು ಪುಸಲಾಯಿಸಿ ಕಚ್ವಾ ಎಂಬ ಗ್ರಾಮದಲ್ಲಿರುವ ಚರ್ಚ್ ಒಂದರಲ್ಲಿ  ಮತಾಂತರ ಮಾಡಿದ್ದಾರೆ ಎಂದು ಗುಂಪು ಆರೋಪಿಸಿದೆ. ಅಷ್ಟೆ ಅಲ್ಲದೇ ಮೂವರಿಗೆ ಒತ್ತಾಯಪೂರ್ವಕವಾಗಿ ಗೋಮಾಂಸ ತಿನ್ನಿಸಲಾಗಿದೆ ಎಂದು ಗುಂಪು ಕಿಡಿಕಾರಿದೆ.
 
ಅಷ್ಟೇ ಅಲ್ಲದೆ ಮತಾಂತರವಾಗಿರುವ ಮೂವರಲ್ಲಿ ಒಬ್ಬರನ್ನು (ಸಂಗಮ್ ಜಾತವ್) ಕರೆದು ತಂದು ನಡೆದ ಘಟನೆಯನ್ನು ವಿವರಿಸುವಂತೆ ಬಜರಂಗದ ದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
 
ನಮ್ಮ ಇಚ್ಛೆಗೆ ವಿರುದ್ಧವಾಗಿ ಮತಾಂತರ ನಡೆಸಲಾಗಿದೆ ಎಂದು ಒಪ್ಪಿಕೊಂಡಿರುವ ಸಂಗಮ್ ಹಿಂದೂ ದೇವ-ದೇವತೆಗಳ ಭಾವಚಿತ್ರಗಳನ್ನು ನೆಲದ ಮೇಲೆ ಎಸೆದು  ನಮ್ಮನ್ನು ಬಲವಂತವಾಗಿ ಅದರ ಮೇಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ