ಸಾರ್ವಜನಿಕರೆ ಬಾರ್‌ಗರ್ಲ್ಸ್‌‌‌ಗಳಿಗೆ ಹಣ ನೀಡಿ ಎಂದ ಉಪಜೈಲಾಧಿಕಾರಿ

ಗುರುವಾರ, 21 ಆಗಸ್ಟ್ 2014 (19:40 IST)
ಕೃಷ್ಣ ಜನ್ಮಾಷ್ಟಮಿಯಂದು ಜಿಲ್ಲಾ ಕಾರಾಗೃಹದ ಎದುರುಗಡೆ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾರ್‌ಗರ್ಲ್ಸ್‌ಗಳು ಕೈದಿಗಳಿಗೆ ಇಷ್ಟವಾದ ಹಾಡುಗಳನ್ನು ಹಾಡಲಿ, ಪ್ರೇಕ್ಷಕರು ಹಣ ಏಕೆ ತೆಗೆಯುತ್ತಿಲ್ಲ" ಬಾರ್‌ಗರ್ಲ್‌ಗಳ ಮೇಲೆ ಹಣವನ್ನು ಎಸೆಯಿರಿ ಎಂದು ಒತ್ತಾಯಿಸಿದ ನಾಚಿಕೆಗೇಡಿನ ವ್ಯಕ್ತಿ ಬೇರಾರಲ್ಲ ಜಿಲ್ಲಾ ಕಾರಾಗೃಹದ ಉಪಜೈಲಾಧಿಕಾರಿ ರವೀಂದ್ರ ಸರೋಜ್.  
 
ಪ್ರತಿ ವರ್ಷ ಜಿಲ್ಲಾ ಕಾರಾಗೃಹ ಸಿಬ್ಬಂದಿ ಮತ್ತು ನೆರೆಹೊರೆಯ ನಿವಾಸಿಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಅದರಂತೆ, ಕಳೆದ ಸೋಮವಾರವು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜಿಲ್ಲಾ ಕಾರಾಗೃಹದ ಎದುರುಗಡೆ ಇರುವ ದುರ್ಗಾ ಮಂದಿರದ ಪರಿಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಬಾರ್‌ ಗರ್ಲ್ಸ್‌‌ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. 
 
ರಾತ್ರಿ ಸುಮಾರು ಒಂಬತ್ತು ಗಂಟೆಗೆ ಡ್ಯಾನ್ಸ್‌ ಪ್ರಾರಂಭವಾದಾಗ ಉಪ ಜೈಲಾಧಿಕಾರಿ ರವೀಂದ್ರ ಸರೋಜ್‌‌ ಕೂಡ ಆಗಮಿಸಿದರು. 
 
ಸ್ವಲ್ಪ ಸಮಯದ ನಂತರ ವೀಕ್ಷಕರ ಮಧ್ಯೆ ಖುರ್ಚಿ ಮೇಲೆ ಕುಳಿತುಕೊಂಡು ಮೈಕ್‌ ಬೇಡಿದರು ಮತ್ತು ಜೈಲಿನ ಖೈದಿಗಳಿಗೆ ಇಷ್ಟವಾಗುವ ಒಂದು ಸಿನೆಮಾ ಹಾಡನ್ನು ಹಾಡಲು ತಿಳಿಸಿದರು. 
 
ನಂತರ ವೀಕ್ಷಕರಿಗೆ, ಬಾರ್‌‌ಗರ್ಲ್ಸ್‌‌‌‌‌ಗಳಿಗೆ ಹಣ ನೀಡುವಂತೆ ತಿಳಿಸಿದರು. ವೀಕ್ಷಕರ ಮಧ್ಯೆ ಕುಳಿತು ಉಪಜೈಲಾಧಿಕಾರಿ ಒಂದು ಹಾಡು ಕೂಡ ಹಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮ ಮಧ್ಯರಾತ್ರಿಯವರೆಗೆ ನಡೆದಿತ್ತು. 
 
ಇದೊಂದು ಸಾರ್ವಜನಿಕ ಕಾರ್ಯಕ್ರಮವಾಗಿದೆ. ಇದರಲ್ಲಿ ಒಂದು ವೇಳೆ ಉಪಜೈಲಾಧಿಕಾರಿ ಭಾಗಿಯಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ. ಎಂದು ಜೈಲಿನ ಅಧೀಕ್ಷಕ ಎಕೆ ಸಿಂಗ್‌‌ ತಿಳಿಸಿದ್ದಾರೆ. ಖೈದಿಗಳಿಗೆ ಇಷ್ಟವಾಗುವ ಹಾಡು ಹಾಡುವಂತೆ ಮನವಿ ಮಾಡಿಕೊಂಡಿದ್ದು ಮತ್ತು ಹಾಡು ಹಾಡಿದ್ದರ ಬಗ್ಗೆ ಅಧೀಕ್ಷಕರು ಮೌನವಹಿಸಿದರು ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ