ಗ್ಯಾಂಗ್‌ರೇಪ್ ಕೈದಿಯನ್ನು ಸಂದರ್ಶಿಸಿದ ಬಿಬಿಸಿ: ರಾಜನಾಥ್ ಸಿಂಗ್ ಖಂಡನೆ

ಮಂಗಳವಾರ, 3 ಮಾರ್ಚ್ 2015 (15:54 IST)
ನಿರ್ಭಯಾ ಪ್ರಕರಣದ ಗ್ಯಾಂಗ್‌‍ರೇಪ್ ಕೈದಿ ಮುಕೇಶ್ ಸಿಂಗ್‌ನನ್ನು ಬಿಬಿಸಿ ಸಂದರ್ಶನ ಮಾಡಿರುವ ಬಗ್ಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜೈಲಿನ ಮುಖ್ಯಾಧಿಕಾರಿಯಿಂದ ವಿಸ್ತೃತ ವರದಿಯನ್ನು ನೀಡುವಂತೆ ಕೋರಿದ್ದಾರೆ.

ಜೈಲಿನಲ್ಲಿರುವ ಕೈದಿಯನ್ನು ಸಂದರ್ಶನ ಮಾಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ತಿಹಾರ್ ಜೈಲಿನ ನಿರ್ದೇಶಕ ಜನರಲ್ ಅಲೋಕ್ ಕುಮಾರ್ ವರ್ಮಾ ಅವರ ಜೊತೆ ಮಾತನಾಡಿ ಈ ಕುರಿತು ತುರ್ತಾಗಿ ವಿವರ ಕಳಿಸುವಂತೆ ಹೇಳಿದ್ದಾರೆ.ಬ್ರಿಟಿಷ್ ಚಿತ್ರತಯಾರಕ ಲೆಸ್ಲೀ ಉಡ್ವಿನ್ ಮತ್ತು ಬಿಬಿಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಬಸ್ ಚಾಲಕ ಮುಕೇಶ್ ಸಿಂಗ್ ಸಂದರ್ಶನಕ್ಕೆ ಅನುಮತಿ ನೀಡಲಾಗಿತ್ತು.

ಸಂದರ್ಶದಲ್ಲಿ ರಾತ್ರಿ ವೇಳೆ ಸಂಚರಿಸುವ ಮಹಿಳೆಯರು ಪುರುಷ  ಅತ್ಯಾಚಾರಿಗಳ ಗಮನ ಸೆಳೆದರೆ ಅದು ಮಹಿಳೆಯರದ್ದೇ ತಪ್ಪು ಎಂದು ಸಿಂಗ್ ಹೇಳಿದ್ದ. ರೇಪ್‌ಗೆ ಯುವಕನಿಗಿಂತ ಹೆಚ್ಚು ಯುವತಿಯೇ ಜವಾಬ್ದಾರಿ ಎಂದೂ ಅವನು ಹೇಳಿದ್ದ. 

ವೆಬ್ದುನಿಯಾವನ್ನು ಓದಿ