ನಿಷೇಧದ ನಡುವೆಯೂ ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಗಿದೆ: ರಾಜನಾಥ್ ಬೇಸರ

ಗುರುವಾರ, 5 ಮಾರ್ಚ್ 2015 (15:44 IST)
ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಸಂದರ್ಶಿಸಿರುವ ಸಾಕ್ಷ್ಯಚಿತ್ರವನ್ನು ಬ್ರಿಟನ್ ನಲ್ಲಿ ಬಿಬಿಸಿ ವಾಹಿನಿ ಪ್ರಸಾರ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನ್ಯಾಯಾಲಯದ ನಿಷೇಧ ಆದೇಶವನ್ನೂ ಮೀರಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಸಿ ಮಾರ್ಚ್ 8ರಂದು ಪ್ರಸಾರ ಮಾಡುತ್ತೇವೆ ಎಂದು ಬಹಿರಂಗಗೊಳಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷ್ಯಚಿತ್ರವನ್ನು ಪ್ಸಾರ ಮಾಡಬಾರದೆಂದು ಸರ್ಕಾರ ಖಡಕ್ ಆದೇಶ ಹೊರಡಿಸಿತ್ತು. ಇದಲ್ಲದೆ ನ್ಯಾಯಾಲಯವೂ ಕೂಡ ಪ್ರಸಾರವಾಗದಂತೆ ಕಟ್ಟಚ್ಚರ ವಹಿಸಿ ಎಂದ ಸೂ5ಚಿಸಿ ಆದೇಶ ನೀಡಿತ್ತು. ಆದರೆ ಸರ್ಕಾರದ ನಿಯಮ ಹಾಗೂ ಕಾನೂನನ್ನೂ ಉಲ್ಲಂಘಿಸಿರುವ ಬಿಬಿಸಿ ಸರ್ಕಾರದಿಂದ ಆದೇಶ ಹೊರ ಬೀಳುತ್ತಿದ್ದಂತೆಯೇ ತರಾತುರಿಯಾಗಿ ಪ್ರಸಾರ ಮಾಡಿದೆ. ಇದರಿಂದ ನನಗೆ ಬೇಸರವಾಗಿದೆ. ಆದರೂ ವಾಹಿನಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.  
 
ಇನ್ನು ಬಿಬಿಸಿ ಎಂದು ಮುಂಜಾನೆ ಇಂಗ್ಲೆಂಡಿನಾದ್ಯಂತ ಇಂಡಿಯನ್ ಡಾಟರ್ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಸಾರ ಮಾಡಿತ್ತು. ಅಲ್ಲದೆ ಪ್ರಸಾರದ ಬಳಿಕ ಪ್ರತಿಕ್ರಿಯಿಸಿದ್ದ ಬಿಬಿಸಿ, ನಿಷೇಧ ಹೇರಿರುವುದು ಕೇವಲ ಭಾರತದಲ್ಲಿಯೇ ಹೊರತು. ಇಂಗ್ಲೆಂಡಿನಲ್ಲಲ್ಲ. ಈ ಹಿನ್ನೆಲೆಯಲ್ಲಿ ಪ್ರಸಾರ ಮಾಡಲಾಗಿದೆ. ಅಲ್ಲದೆ ನ್ಯಾಯಾಲಯದ ಆದೇಶದ ಪ್ರತಿ ನಮಗೆ ತಲುಪಿಲ್ಲ ಎಂದಿದೆ. ಬಿಬಿಸಿ ಈ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಬಿಬಿಸಿಗೆ ನ್ಯಾಯಾಲಯದ ಆದೇಶ ಪ್ರತಿಯನ್ನು ರವಾನಿಸಿದೆ. 

ನಿರ್ಭಯಾ ಪ್ರಕರಣದ ಪ್ರಮುಖ ಆರೋಪಿ ಮುಖೇಶ್ ಸಿಂಗ್ ಎಂಬಾತನನ್ನು ಬಿಬಿಸಿ ಜೈಲಿನಲ್ಲಿಯೇ ಸಂದರ್ಶಿಸಿತ್ತು. ಆ ಸಂದರ್ಸನವನ್ನು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಹಿನ್ನೆಲೆಯಲ್ಲಿ ಅಂದು ಪ್ರಸಾ ಮಾಡಲಾಗುವುದು ಎಂದು ಬಿಬಿಸಿ ತಿಳಿಸಿತ್ತು. ಈ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದ್ದರೂ ಕೂಡ ಸರ್ಕಾರ ಸಂದರ್ಶನಕ್ಕೆ ಹೇಗೆ ಅನುಮತಿ ನೀಡಿತು. ಅಲ್ಲದೆ ಸರ್ಕಾರ ಕಾನೂನನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಈ ಹಿನ್ನೆಲೆಯಲ್ಲಿ ಸರ್ಕಾರನ ಸಾಕ್ಷ್ಯಚಿತ್ರಕ್ಕೆ ನಿಷೇಧವ್ನನು ಹೇರಿತ್ತು. ಈ ಸುದ್ದಿಯನ್ನು ತಿಳಿದ ಬಿಬಿಸಿ ತರಾತುರಿಯಾಗಿ ಇಂದು ಮುಂಜಾನೆ ಇಂಗ್ಲೆಂಡ್‌ನಲ್ಲಿ ಪ್ರಸಾರ ಮಾಡಿತ್ತು. ಇದರಿಂದ ಸಚಿವರು ಬೇಸರಗೊಂಡಿದ್ದಾರೆ. 
 
ಹಾಗಾದರೆ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ಏನಿತ್ತು ?
ಆರೋಪಿ ಸಿಂಗ್, ಅತ್ಯಾಚಾರ ಎಸಗುವಾಗ ಅವಳು(ನಿರ್ಭಯಾ) ವಿರೋಧಿಸದೆ ಸಹಕರಿಸಿದ್ದಿದ್ದರೆ ಅವಳನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿರಲಿಲ್ಲ. ಅಲ್ಲದೆ ಸಭ್ಯ ಮಹಿಳೆಯರು ರಾತ್ರಿ 9 ಗಂಟೆ ವೇಳೆಯಲ್ಲಿ ಅಲೆಯುವುದು ಸರಿಯಲ್ಲ. ಅತ್ಯಾಚಾರ ವಿಷಯದಲ್ಲಿ ಯುವತಿಗೂ ಕೂಡ ಯುವಕನಷ್ಟೇ ಜವಾಬ್ದಾರಿ ಇರುತ್ತದೆ. ಯುವತಿಯರಿಗೆ ಮನೆಗೆಲಸ ಮೀಸಲಾಗಿದೆ. ಆದರೆ ಅದನ್ನು ಬಿಟ್ಟು ಡಿಸ್ಕೋಗಳಲ್ಲಿ, ಬಾರ್‌ಗಳಲ್ಲಿ ಯುವಕರ ಜೊತೆ ಅಲೆಯುತ್ತಾರೆ. ಅಲ್ಲದೆ ಅಶ್ಲೀಲ ಉಡುಪುಗಳನ್ನು ಧರಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದ. 

ವೆಬ್ದುನಿಯಾವನ್ನು ಓದಿ