ಗೋಮಾಂಸ ಪಾರ್ಟಿ ಗಲಾಟೆ: ಶಾಸಕ ಎಂಜಿನಿಯರ್ ರಶೀದ್ ಪ್ರತಿಭಟನೆ

ಶುಕ್ರವಾರ, 9 ಅಕ್ಟೋಬರ್ 2015 (13:12 IST)
ವಿಧಾನಸಭೆಯಲ್ಲೇ ಬಿಜೆಪಿ ಶಾಸಕರಿಂದ ಥಳಿತಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಸರ್ಕಾರದ ವಿರುದ್ಧ ಇಂದು ಶ್ರೀನಗರದಲ್ಲಿ ವಿಧಾನಸಭೆ ಎದುರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಧರಣಿ ನಡೆಸುತ್ತಿದ್ದ ಶಾಸಕ ಮತ್ತು ಅವರ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಹೀಗಾಗಿ ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. 
 
ಲಂಗಟೆ ಕ್ಷೇತ್ರದ ಶಾಸಕ ರಹೀದ್, ಬುಧವಾರ ಎಮ್ಎಲ್ಎ ವಸತಿ ನಿಲಯದಲ್ಲಿ ಬುಧವಾರ ಬೀಫ್ ಪಾರ್ಟಿಯನ್ನು ಆಯೋಜಿಸಿದ್ದರು. ಗುರುವಾರ ಮುಂಜಾನೆ ವಿಧಾನಸಭಾ ಕಲಾಪ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಪಾರ್ಟಿಯ ಕುರಿತು ರಶೀದ್ ಬಳಿ ಪ್ರಶ್ನಿಸಿದಾಗ, ತಾನು ಕಾಶ್ಮೀರದಲ್ಲಿ ಇಂತಹ 1,000 ಪಾರ್ಟಿ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದ್ದರು. ಬಿಜೆಪಿ ಶಾಸಕರೊಬ್ಬರು ಹೇಳುವ ಪ್ರಕಾರ ರಶೀದ್ ನಿರ್ದಿಷ್ಟವಾಗಿ 'ಹಸುವಿನ ಬೀಫ್ ಪಾರ್ಟಿ' ಎಂದು ಉಲ್ಲೇಖಿಸಿದ್ದರು. ಈ ಮಾತುಗಳನ್ನು ಕೇಳಿ ಕೆರಳಿದ ಬಿಜೆಪಿ ಶಾಸಕರು ರಶೀದ್‌ನನ್ನು ಹಿಡಿದು ಥಳಿಸಿದ್ದಾರೆ. ಪ್ರತಿಯಾಗಿ ರಶೀದ್ ಕೂಡ ಹಲ್ಲೆ ನಡೆಸಿದ್ದಾರೆ.
 
ರಶೀದ್ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾನೆ ಎಂದು ಹೇಳಿರುವ ಬಿಜೆಪಿ ಶಾಸಕರು ಆತ ಹೇಳಿದಂತೆ 1,000 ಬಾರಿ ಪಾರ್ಟಿ ನಡೆಸಿದರೆ, 1,000 ಬಾರಿ ಥಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ