ಭಿಕ್ಷುಕನಿಗೆ ಒಲಿದ 65 ಲಕ್ಷ ರೂ. ಜಾಕ್‌ಪಾಟ್

ಶುಕ್ರವಾರ, 1 ಏಪ್ರಿಲ್ 2016 (20:22 IST)
ಇದೊಂದು ದಟ್ಟ ದರಿದ್ರ ವ್ಯಕ್ತಿ ಶ್ರೀಮಂತಿಕೆ ಪಡೆದ ಕಥೆಯಾಗಿದೆ. ಆದರೆ ಈ ವ್ಯಕ್ತಿ ಸ್ವಂತ ಪರಿಶ್ರಮದಿಂದ ಶ್ರೀಮಂತನಾಗಿಲ್ಲ. ಅನಾಯಾಸದಿಂದ ಅದೃಷ್ಟದ ದೆಸೆಯಿಂದ ಭಿಕ್ಷುಕ ಶ್ರೀಮಂತಿಕೆಯ ಸುಪ್ಪಿತ್ತಿಗೆಗೆ ಏರಿದ್ದಾನೆ. ಆಂಧ್ರಪ್ರದೇಶದ ಈ ಭಿಕ್ಷುಕ ಭಿಕ್ಷೆ ಬೇಡುವುದಕ್ಕೆ ಉತ್ತಮ ಅವಕಾಶಕ್ಕಾಗಿ ಅರಸಿಕೊಂಡು ಕೇರಳಕ್ಕೆ ವಲಸೆ ಬಂದಿದ್ದ. ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ ಇರಿಸಿಕೊಂಡಿದ್ದ ಪೊನ್ನಯ್ಯನಿಗೆ 65 ಲಕ್ಷ ರೂ. ರಾಜ್ಯಸ್ವಾಮ್ಯದ ಅಕ್ಷಯ ಲಾಟರಿ ಒಲಿದಿದೆ. 
 
ವಲಸೆ ಭಿಕ್ಷುಕನಾಗಿದ್ದ ಪೊನ್ನಯ್ಯ ವೆಲ್ಲಾರಾದದಲ್ಲಿ ವಾಸಿಸುತ್ತಿದ್ದು, ಭಿಕ್ಷೆ ಬೇಡಿ ಸಿಕ್ಕಿದ ಪುಡಿಗಾಸಿನಲ್ಲಿ ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ ಹೊಂದಿದ್ದ. ಪೊನ್ನಯ್ಯಾ 90,000 ರೂ.ವರೆಗೆ ಸಮಾಧಾನಕರ ಬಹುಮಾನಗಳನ್ನು ಕೂಡ ಪಡೆದಿದ್ದಾನೆ. ಪೊಲೀಸರು ಪೊನ್ನಯ್ಯನ ಟಿಕೆಟ್‌ಗೆ ಲಾಟರಿ ಬಹುಮಾನ ಸಿಕ್ಕಿದ ಬಗ್ಗೆ ಮಾಹಿತಿ ನೀಡಿದ ಬಳಿಕ , ಅವರ ತಂದೆ ಮತ್ತು ಸೋದರ ಇಲ್ಲಿಗೆ ಬಂದು ಬಹುಮಾನ ಹಣದ ವಹಿವಾಟಿನ ವಿಧಿವಿಧಾನ ಮುಗಿಸಿ ಪೊನ್ನಯ್ಯನನ್ನು ಮನೆಗೆ ಕರೆದುಕೊಂಡು ಹೋದರು. 
 
ಪೊನ್ನಯ್ಯ ಭಿಕ್ಷೆ ಬೇಡಿ ಬಂದ ಹಣವನ್ನು ಕುಟುಂಬಕ್ಕೆ ಕಳಿಸುತ್ತಿದ್ದ ಮತ್ತು ಪ್ರತಿ ತಿಂಗಳು ಲಾಟರಿ ಟಿಕೆಟ್ ಖರೀದಿಸಲು ಹಣವನ್ನು ಉಳಿತಾಯ ಮಾಡುತ್ತಿದ್ದ.  ಪೊನ್ನಯ್ಯ ಬಹುಮಾನ ಗೆದ್ದಿದ್ದನ್ನು ಅವನಿಗೆ ಟಿಕೆಟ್ ಮಾರಿದ ಸ್ಥಳೀಯ ಏಜಂಟ್ ಪತ್ತೆ ಹಚ್ಚಿ ಅವನನ್ನು ಪೊಲೀಸ್ ಠಾಣೆಗೆ ಸುರಕ್ಷತೆ ದೃಷ್ಟಿಯಿಂದ ಕರೆದುಕೊಂಡು ಹೋಗಿದ್ದ. 

ವೆಬ್ದುನಿಯಾವನ್ನು ಓದಿ