ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಸಹೋದರಿ ಪ್ರಕಾಶ್ ಕೌರ್ ಇನ್ನಿಲ್ಲ

ಸೋಮವಾರ, 29 ಸೆಪ್ಟಂಬರ್ 2014 (16:35 IST)
ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅಪ್ಪಟ ದೇಶಭಕ್ತ ಭಗತ್ ಸಿಂಗ್ ಅವರ ಕಿರಿಯ ಸಹೋದರಿ ಪ್ರಕಾಶ್ ಕೌರ್ ಇಂದು ಕೆನಡಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 
 
ಭಗತ್ ಸಿಂಗ್ ಕುಟುಂಬದ ಜೀವಂತವಾಗಿ ಉಳಿದಿದ್ದ ಏಕೈಕ ಸದಸ್ಯೆಯಾಗಿದ್ದ 96 ವರ್ಷ ವಯಸ್ಸಿನ ಕೌರ್, ಕೆನಡಾದ ಟೊರೊಂಟೊ ನಗರದಲ್ಲಿ ವಾಸವಾಗಿದ್ದರು. 
 
ಪಂಜಾಬ್‌ನ ಹೋಷಿಯಾರ್‌ಪುರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಪ್ರಕಾಶ್ ಕೌರ್ ಅಳಿಯ ಹರಭಜನ್ ಸಿಂಗ್ ಧಾತ್, ರವಿವಾರದಂದು ಪ್ರಕಾಶ್ ಕೌರ್ ಇಹಲೋಕ ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 
 
ಅಪ್ಪಟ ದೇಶಪ್ರೇಮಿಯಾಗಿದ್ದ ಭಗತ್ ಸಿಂಗ್ 1928ರಲ್ಲಿ ಲಾಹೋರ್‌ನಲ್ಲಿ  ಬ್ರಿಟನ್ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ 1931 ಮಾರ್ಚ್ 24 ರಂದು ಗಲ್ಲಿಗೇರಿಸಲಾಗಿತ್ತು.
 
ಭಗತ್ ಸಿಂಗ್ ಅವರ 107ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ