ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಗೊತ್ತಾ ?

ಶನಿವಾರ, 16 ಆಗಸ್ಟ್ 2014 (18:29 IST)
ಭಾರತ ರತ್ನ ಪಡೆದವರಿಗೆ ಭಾರತ ಸರ್ಕಾರದಿಂದ ಕೇವಲ ಒಂದು ಪ್ರಮಾಣ ಪತ್ರ ಮತ್ತು ಪದಕ ಮಾತ್ರ ಸಿಗುತ್ತದೆ. ಈ ಸನ್ಮಾನದ ಜೊತೆಗೆ ಯಾವುದೇ ರೀತಿಯ ಹಣ ನೀಡಲಾಗುವುದಿಲ್ಲ. ಭಾರತ ರತ್ನ ಪಡೆಯುವವರಿಗೆ ಸರಕಾರದಿಂದ ಕೆಲವು ಸೌಲಭ್ಯಗಳು ಸಿಗುತ್ತವೆ. ಉದಾಹರಣೆಗೆ ಭಾರತ ರತ್ನ ಪಡೆದವರಿಗೆ ರೈಲ್ವೆ ಇಲಾಖೆಯಿಂದ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತದೆ. 
 
ಭಾರತ ರತ್ನ ಪಡೆದವರಿಗೆ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಿಸಲಾಗುತ್ತದೆ. ಸರಕಾರ ಇವರಿಗೆ ವಾರೆಂಟ್‌ ಆಫ್‌‌‌ ಪ್ರಿಸಿಡೆನ್ಸ್‌‌‌ನಲ್ಲಿ ಸ್ಥಾನ ಸಿಗುತ್ತದೆ. ಭಾರತ ರತ್ನ ಪಡೆದವರಿಗೆ ಪ್ರೊಟೋಕಾಲ್‌‌‌‌ನಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ, ಮಾಜಿ ರಾಷ್ಟ್ರಪತಿ, ಉಪಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಲೋಕಸಭಾ ಸ್ಪೀಕರ್‌, ಕ್ಯಾಬಿನೆಟ್‌ ಮಂತ್ರಿ, ಮುಖ್ಯಮಂತ್ರಿ, ಮಾಜಿ ಪ್ರಧಾನ ಮಂತ್ರಿ ಮತ್ತು ಸಂಸತ್ತಿನ ಎರಡೂ ಸದನದ ವಿರೋಧ ಪಕ್ಷದ ನಾಯಕರ ನಂತರದ ಸ್ಥಾನ ಲಭಿಸುತ್ತದೆ. 
 
ವಾರೆಂಟ್‌ ಆಫ್‌‌ ಪ್ರಿಸಿಡೆನ್ಸ್‌‌ನ ಬಳಕೆಯಿಂದ ಸರಕಾರಿ ಕಾರ್ಯಕ್ರಮದಲ್ಲಿ ಭಾರತ ರತ್ನ ಪಡೆದವರಿಗೆ ಆದ್ಯತೆಯಿರುತ್ತದೆ. ರಾಜ್ಯ ಸರಕಾರ ಕೂಡ ತಮ್ಮ ರಾಜ್ಯದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಸೌಲಭ್ಯಗಳನ್ನು ನೀಡುತ್ತದೆ. ದೆಹಲಿ ಸರಕಾರದ ಡಿಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವಿರುತ್ತದೆ. 
 
ಭಾರತ ರತ್ನ ಪಡೆದವರ ವಿಜಿಟಿಂಗ್‌‌ ಕಾರ್ಡ್‌‌‌ನ ಮೇಲೆ " ರಾಷ್ಟ್ರಪತಿಯಿಂದ ಭಾರತ ರತ್ನ ಸನ್ಮಾನಿತ" ಅಥವಾ " ಭಾರತ ರತ್ನ ಸ್ವೀಕರಿಸಿದವರು" ಎಂದು ಬರೆಯಬಹುದಾಗಿದೆ.

ವೆಬ್ದುನಿಯಾವನ್ನು ಓದಿ