ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಹಾಟ್ ನಟಿ ಪೂಜಾ ಮಿಶ್ರಾ ಮೇಲೆ ಅಪರಿಚಿತರಿಂದ ರೇಪ್

ಗುರುವಾರ, 16 ಏಪ್ರಿಲ್ 2015 (19:48 IST)
ಬಿಗ್‌ಬಾಸ್- 5 ಸರಣಿಯಲ್ಲಿ ಪಾಲ್ಗೊಂಡಿದ್ದ ನಟಿ ಪೂಜಾ ಮಿಶ್ರಾ ಮೇಲೆ ಅಪರಿಚಿತ ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ನನಗೆ ನೀಡಲಾಗಿತ್ತು. ನಾನು ಪ್ರಜ್ಞೆಯನ್ನು ಕಳೆದುಕೊಂಡಾಗ ನನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ನಟಿ ಮಿಶ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಕ್ಯಾಲೆಂಡರ್ ಶೂಟಿಂಗ್‌ಗಾಗಿ ನಗರಕ್ಕೆ ಆಗಮಿಸಿದ್ದ ಮಿಶ್ರಾ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಳು.

ರಾತ್ರಿ ಹೋಟೆಲ್‌ನಲ್ಲಿ ಊಟವಾದ ನಂತರ ನನಗೆ ತಂಪು ಪಾನೀಯ ನೀಡಲಾಗಿತ್ತು. ತಂಪು ಪಾನೀಯ ಸೇವಿಸಿದ ನಂತರ ನನ್ನ ರೂಮ್‌ಗೆ ವಾಪಸಾಗಿ ಗಾಢ ನಿದ್ರೆಯಲ್ಲಿದ್ದೆ. ನಾನು ಬೆಳಿಗ್ಗೆ ಎದ್ದು ನೋಡಿದಾಗ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾಳೆ.

ನಟಿ ಪೂಜಾ ಮಿಶ್ರಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ನಾಳೆ ವರದಿ ಬರಲಿದೆ. ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಿವುಡ್ ಚಿತ್ರರಂಗದ ಕೆಲ ನಟರು ಮತ್ತು ಉದ್ಯಮಿಗಳು ನನ್ನ ವಿರುದ್ಧ ಸಂಚು ನಡೆಸಿದ್ದರು ಎಂದು ನಟಿ ಪೂಜಾ ಮಿಶ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ