ಬಿಹಾರ್ ಚುನಾವಣೆ ಸೋಲಿನ ಪ್ರಭಾವ ತಾತ್ಕಾಲಿಕ: ಬಿಜೆಪಿ

ಮಂಗಳವಾರ, 17 ನವೆಂಬರ್ 2015 (19:39 IST)
ಬಿಹಾರ್ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಲವು ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದ್ದರೂ, ಸೋಲಿನ ಪ್ರಭಾವ ಶಾಶ್ವತವಾಗಿ ಇರುವುದಿಲ್ಲ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. 
 
ಬಿಹಾರ್ ಚುನಾವಣೆ ಸೋಲಿನ ಪ್ರಭಾವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೇಲೆ ಬೀರುವುದಿಲ್ಲ. ಒಂದು ವೇಳೆ, ಚುನಾವಣೆಯಲ್ಲಿ ಗೆದ್ದಿದ್ದರೂ ಅದರ ಪ್ರಭಾವ ತಾತ್ಕಾಲಿಕವಾಗಿರುತ್ತಿತ್ತು. ಬಿಹಾರ್ ಮತ್ತು ಬಂಗಾಳದಲ್ಲಿ ರಾಜಕೀಯ ಭಿನ್ನವಾಗಿದೆ. ಬಿಹಾರ್‌ನಲ್ಲಿ ಜಾತಿ ರಾಜಕೀಯವಿದೆ. ಆದರೆ, ಬಂಗಾಳದ ಅಭಿವೃದ್ಧಿ ರಾಜಕೀಯ, ಟಿಎಂಸಿ ಪಕ್ಷದ ಭಯೋತ್ಪಾದನೆಯ ಮಧ್ಯೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ ಹೇಳಿದ್ದಾರೆ.    
 
ನವೆಂಬರ್ 30 ರಂದು ಕೋಲ್ಕತಾದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಅಮಿತ್ ಶಾ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿತ್ತು. ಬಿಜೆಪಿ ನಾಯಕರಾದ ಸಿದ್ದಾರ್ಧನಾಥ್ ಸಿಂಗ್ ಮತ್ತು ಕೈಲಾಶ್ ವಿಜಯವರ್ಗೀಯ ಪಾಲ್ಗೊಳ್ಳಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 
 
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಮಾತನಾಡಿ, ನೆರೆಯ ರಾಜ್ಯದಲ್ಲಿ ನಡೆದ ಚುನಾವಣೆ ಫಲಿತಾಂಶ ಬಂಗಾಳದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಬಿಹಾರ್‌ನಲ್ಲಿ ಕಳೆದ 2005ರಿಂದ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಬಂಗಾಳದಲ್ಲಿ ಯಾವುದಾದರೂ ಪರಿಣಾಮ ಬೀರಿದೆಯೇ ಎಂದು ಪ್ರಶ್ನಿಸಿದರು.
 

ವೆಬ್ದುನಿಯಾವನ್ನು ಓದಿ