ಬಿಹಾರ ಮುಖ್ಯಮಂತ್ರಿಯ ಹೊಸ ಮದ್ಯಪಾನ ರೂಲ್ಸ್ ಗೆ ಬೆಚ್ಚಿಬಿದ್ದ ಅಧಿಕಾರಿಗಳು!

ಶುಕ್ರವಾರ, 17 ಫೆಬ್ರವರಿ 2017 (11:46 IST)
ಪಾಟ್ನಾ: ಬಿಹಾರದ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ರಾಜ್ಯದಿಂದ ಹೊರಗೆ ಕಾಲಿಟ್ಟರೆ, ಮದ್ಯಪಾನ ಮಾಡುವಂತಿಲ್ಲ. ಹೀಗೊಂದು ಹೊಸ ನಿಯಮವನ್ನು ರಾಜ್ಯದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಹೊರಡಿಸಿದೆ.

 
ಸರ್ಕಾರಿ ಅಧಿಕಾರಿಗಳು,  ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್ ಗಳು ಬೇರೆ ರಾಜ್ಯಗಳಿಗೆ ಹೋದಾಗ ಅಥವಾ ವಿದೇಶ ಪ್ರವಾಸ ಮಾಡಿದಾಗ ಮದ್ಯಪಾನ ಮಾಡಿ ಸಿಕ್ಕಿ ಬಿದ್ದರೆ ಅಮಾನತು, ವೇತನ ಕಡಿತ ಅಥವಾ ಕೆಲಸ ಕಳೆದುಕೊಳ್ಳುವ ಶಿಕ್ಷೆ ಅನುಭವಿಸಬೇಕಾದೀತು. ಇಂತಹದ್ದೊಂದು ನಿಯಾಮವಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸರ್ಕಾರಿ ಅಧಿಕಾರಿಗಳ ಮೇಲೆ ನಿಯಂತ್ರಣ ಹೇರುವಂತಹ ನಿಯಮಾವಳಿ ತಂದ ಮೊದಲ ರಾಜ್ಯ ಬಿಹಾರ. ಈ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಿದ ಮೇಲೂ ಸರ್ಕಾರಿ ಅಧಿಕಾರಿಗಳು ಕುಡಿದು ಸಿಕ್ಕಿ ಬೀಳುತ್ತಿದ್ದರಿಂದ ರಾಜ್ಯ ಸರ್ಕಾರ ಇಂತಹದ್ದೊಂದು ನಿಯಮಾವಳಿ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ