ಬಿಹಾರ್ ಚುನಾವಣೆ: ಬಿಹಾರ್ ಜನತೆ ತುಂಬಾ ಬುದ್ದಿವಂತರು ಎಂದು ಹೊಗಳಿದ ಪ್ರದಾನಿ ಮೋದಿ

ಮಂಗಳವಾರ, 1 ಸೆಪ್ಟಂಬರ್ 2015 (21:29 IST)
ಡಿಎನ್‌ಎ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೀಗ, ಬಿಹಾರ್ ಜನತೆ ತುಂಬಾ ಬುದ್ದಿವಂತರು ಎಂದು ಹೊಗಳಿದ್ದಾರೆ.
 
ಡಿಎನ್‌ಎ ಹೇಳಿಕೆ ನೀಡಿದ್ದ ಮೋದಿ ವಿರುದ್ಧ ಬಿಹಾರ್ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಾಗ್ದಾಳಿ ನಡೆಸಿ ಡಿಎನ್‌ಎ ಸ್ಯಾಂಪಲ್‌ಗಳನ್ನು ಕೂಡಾ ಮೋದಿಗೆ ರವಾನಿಸಿದ್ದರು. ನಿತೀಶ್ ಚುನಾವಣೆಯಲ್ಲಿ ಡಿಎನ್‌ಎ ಎನ್ನುವ ವಿಷಯವನ್ನು ಹೊಸ ಅಸ್ತ್ರವನ್ನಾಗಿಸಿಕೊಂಡಿದ್ದರು.
ಬಿಹಾರ್ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಉಭಯ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಮೈತ್ರಿ ಮಾಡಿಕೊಂಡು ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್‌ರಂತಹ ಮಹಾನ್ ನಾಯಕರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
 
ಕಳೆದ 25 ವರ್ಷಗಳ ಅಧಿಕಾರವಧಿಯಲ್ಲಿ ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಯಾದವ್ ಜಾತಿಯ ಮತ್ತು ಕೋಮುವಾದದ ವಿಷ ಬೀಜ ಬಿತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. 
 
ಜನತಾ ಪರಿವಾರದ ಸ್ವಾಭಿಮಾನ್ ರ್ಯಾಲಿಗೆ ಪರ್ಯಾಯವಾಗಿ ಪರಿವರ್ತನಾ ರ್ಯಾಲಿ ಹಮ್ಮಿಕೊಂಡ ಬಿಜೆಪಿ, ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ವಿರುದ್ಧ ಚುನಾವಣೆ ರಣಕಹಳೆ ಮೊಳಗಿಸಿದೆ. 
 
ಸುಮಾರು 25 ವರ್ಷಗಳ ನಂತರ ಬಿಹಾರ್ ಜನತೆ ಅಭಿವೃದ್ಧಿಗಾಗಿ ಮತ್ತು ಅಭಿವೃದ್ಧಿ ಪರ ಸರಕಾರ ರಚನೆಗಾಗಿ ಮತಹಾಕಲು ನಿರ್ಧರಿಸಿರುವುದು ತಡೆಯಲು ಯಾವುದೇ ರಾಜಕೀಯ ಪಕ್ಷಗಳಿಂದಲು ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.  
 
ಜಯಪ್ರಕಾಶ್ ನಾರಾಯಣ್‌ರನ್ನು ಜೈಲಿಗೆ ತಳ್ಳಿದ್ದ ಕಾಂಗ್ರೆಸ್ ಪಕ್ಷದೊಂದಿಗೆ ಬಿಹಾರ್ ನಾಯಕರು ಕೇವಲ ಅಧಿಕಾರದ ಆಸೆಗಾಗಿ ಕೈ ಜೋಡಿಸಿದ್ದಾರೆ. ಇಂತಹ ಪಕ್ಷಗಳನ್ನು ಜನತೆ ದೂರವಿಡಬೇಕು ಎಂದು ಕರೆ ನೀಡಿದರು.

ವೆಬ್ದುನಿಯಾವನ್ನು ಓದಿ