ಪ್ರಧಾನಿ ನರೇಂದ್ರ ಮೋದಿ ಅಪನಂಬಿಕೆಯ ವ್ಯಕ್ತಿ: ಆರ್‌ಜೆಡಿ

ಶನಿವಾರ, 1 ಆಗಸ್ಟ್ 2015 (15:24 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಬಿಹಾರ್ ಜನತೆ ಭಾವಿಸಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ಮನೋಜ್ ಝಾ ಹೇಳಿದ್ದಾರೆ.
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ, ಇದೀಗ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸುತ್ತಿದೆ ಎಂದು ಜೆಡಿಯು ವಾಗ್ದಾಳಿ ನಡೆಸಿದೆ. 
 
ಯಾವುದೇ ರಾಜಕಿಯೇತರ ಬಿಹಾರ್ ಮೂಲದ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ಮಾತುಗಳನ್ನು ನಂಬುವುದಿಲ್ಲ. ಹಲವಾರು ಬಾರಿ ವಾಗ್ದಾನಗಳನ್ನು ಮುರಿದಿದ್ದಾರೆ. ದೆಹಲಿಯಲ್ಲಿ ಕೆಜ್ರಿವಾಲ್ ಬಿಜೆಪಿಯ ಬೆನ್ನೆಲಬು ಮುರಿದಂತೆ ಬಿಹಾರ್‌ ಜನತೆ ಕೂಡಾ ಬಿಜೆಪಿಯಿಂದ ವಿಮಖವಾಗಿದ್ದಾರೆ ಎಂದು ತಿಳಿಸಿದ್ದಾರೆ. 
 
ಸರಕಾರಿ ಮೂಲಗಳ ಪ್ರಕಾರ, 14ನೇ ಹಣಕಾಸು ಆಯೋಗ ವಿಶೇಷ ಮತ್ತು ಸಾಮಾನ್ಯ ರಾಜ್ಯಗಳು ಎನ್ನುವ ಬಗ್ಗೆ ವರ್ಗಿಕರಿಸಿಲ್ಲವಾದ್ದರಿಂದ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಮೋದಿ ಸರಕಾರ ಬಿಹಾರ್ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದೆ.   
 
ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ನೀತಿಗಳಿಲ್ಲ ಎಂದು ಕೇಂದ್ರ ಸರಕಾರ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ತಿರಸ್ಕರಿಸಿದೆ.  
 
ಕನಿಷ್ಠ 12 ಸಭೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೀಗ ಬಿಹಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಬಿಹಾರ್ ವಿಧಾನಸಭೆ ಚುನಾವಣೆಗೆ ಮುನ್ನವೇ ಬಿಜೆಪಿಯ ನಿಲುವು ಬಹಿರಂಗವಾಗಿದ್ದರಿಂದ ಸಂತಸವಾಗಿದೆ ಎಂದು ಆರ್‌ಜೆಡಿ ಮುಖಂಡ ಮನೋಜ್ ಝಾ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ